ಪುನೀತ್ ಅನ್ನಸಂತರ್ಪಣೆ ವೇಳೆ ರಕ್ತದಾನ ಮಾಡಿದ ನಟ ಶಿವರಾಜ್ ಕುಮಾರ್.

66
firstsuddi

ಬೆಂಗಳೂರು : ನಟ ಪುನೀತ್ ರಾಜ್ ಕುಮಾರ್ ಅವರು ಅಗಲಿ ಇಂದಿಗೆ 12 ದಿನ. ಈ ಹಿನ್ನೆಲೆಯಲ್ಲಿ ಇಂದು ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ ಕಾರ್ಯ ನೆರವೇರಿಸಲಾಗುತ್ತಿದೆ. ಈ ನಡುವೆ ನಟ ಶಿವರಾಜ್ ಕುಮಾರ್ ಅವರು ಲಯನ್ಸ್ ಬ್ಲಡ್ ಬ್ಯಾಂಕ್ ಗೆ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ.

ಅನ್ನ ಸಂತರ್ಪಣಾ ಕಾರ್ಯಕ್ಕೆ ಚಾಲನೆ ನೀಡಿದ ಶಿವಣ್ಣ ಅಪ್ಪು ಅಭಿಮಾನಿಗಳಿಗೆ ಊಟ ಬಡಿಸಿದರು, ಬಳಿಕ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಅಭಿಮಾನಿಗಳಿಗೆ ಊಟ ಬಡಿಸಿದರು.

ಈ ವೇಳೆ ಮಾತನಾಡಿದ ಶಿವರಾಜ್ ಕುಮಾರ್, ಈ ರೀತಿಯಾಗಿ ಸಂದರ್ಭ ಬಂದು ಊಟ ಹಾಕಬೇಕಾಯಿತಲ್ಲ ಎನ್ನುವ ನೋವಿದೆ. ಅವನ ಆಸೆ ಈ ರೀತಿ ನೆರವೇರಬೇಕು ಎನ್ನುವುದು ಆ ದೇವರ ಇಚ್ಛೆಯೋ ಏನೋ..? ಅಭಿಮಾನಿಗಳಿಂದಲೇ ನಾವು ಹೀಗಿದ್ದೇವೆ. ಅಪ್ಪು ನಮ್ಮಿಂದ ದೂರ ಆದಮೇಲೆ ಅವನು ಮಾಡಿರೋ ಸೇವೆಗಳು ಹೊರಗಡೆ ಬರುತ್ತಿವೆ. ನಮಗೆಲ್ಲಾ ತುಂಬಾನೆ ಹೆಮ್ಮೆ ಎನಿಸುತ್ತಿದೆ. ಆ ತರ ತಮ್ಮನ ಪಡಿಯೋಕೆ ನಾನು ಪುಣ್ಯ ಮಾಡಿದ್ದೆ ಎಂದರು.

ಬಳಿಕ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ, ಅವನು ಎಲ್ಲರ ಮನಸಲ್ಲೂ ಇದ್ದಾನೆ, ಎಲ್ಲರೂ ಚೆನ್ನಾಗಿ ಊಟ ಮಾಡಿ. ನಿಮ್ಮ ಊರುಗಳಿಗೆ ಜೋಪಾನವಾಗಿ ಸೇರಿಕೊಳ್ಳಿ ಎಂದು ಮನವಿ ಮಾಡಿದರು.