ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ – ಇಂದಿನ ದರ ಹೀಗಿದೆ…

68
firstsuddi

ನವದೆಹಲಿ : ಸತತ ಮೂರು ವಾರಗಳಿಂದ ಸ್ಥಿರತೆಯಲ್ಲಿದ್ದ ಪೆಟ್ರೋಲ್ ದರ ಇಂದು ಏರಿಕೆ ಕಂಡಿದೆ. ಇಂದು ಲೀಟರ್ ಪೆಟ್ರೋಲ್ ಬೆಲೆಯಲ್ಲಿ 20 ರಿಂದ 25 ಪೈಸೆ ಹೆಚ್ಚಳವಾಗಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 24 ರಿಂದ 27 ಪೈಸೆಯಷ್ಟು ಹೆಚ್ಚಳವಾಗಿದೆ. ಇದು ಕಳೆದ ವಾರದಿಂದ ನಾಲ್ಕನೇ ಬಾರಿ ಆದ ಹೆಚ್ಚಳವಾಗಿದೆ.

ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಗೆ 101.39 ರೂಪಾಯಿ ಆದರೆ, ಲೀಟರ್ ಡೀಸೆಲ್ ದರ 89.57 ರೂಪಾಯಿಗೆ ಏರಿಕೆ ಆಗಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 107.47 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 97.21 ರೂಪಾಯಿಗೆ ಏರಿಕೆ ಆಗಿದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 101.87 ರೂಪಾಯಿಯಷ್ಟಿದೆ. ಲೀಟರ್ ಡೀಸೆಲ್ ದರ 92.67 ರೂಪಾಯಿನಷ್ಟಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಗೆ 99.15 ರೂಪಾಯಿ ಆದರೆ, ಲೀಟರ್ ಡೀಸೆಲ್ ದರ 94.17 ರೂಪಾಯಿಗೆ ಏರಿಕೆ ಆಗಿದೆ.

ಇನ್ನೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 104.92 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 95.06 ರೂಪಾಯಿ ಇದೆ.