ಪೇಸ್ಟ್ ರೂಪದಲ್ಲಿ ಜೀನ್ಸ್ ಪ್ಯಾಂಟ್ ಮೇಲೆ ಚಿನ್ನ ; ಕಳ್ಳಸಾಗಣೆಗೆ ವ್ಯಕ್ತಿ ಮಾಡಿದ ಪ್ಲ್ಯಾನ್!

91
firstsuddi

ಕಣ್ಣೂರು (ಕೇರಳ) : ಪೇಸ್ಟ್ ರೂಪದಲ್ಲಿ ಜೀನ್ಸ್ ಪ್ಯಾಂಟ್ ಮೇಲೆ ಚಿನ್ನದ ಲೇಪನ ಮಾಡಿಕೊಂಡು ಚಿನ್ನ ಸಾಗಾಣೆ ಮಾಡುತ್ತಿದ್ದ ವ್ಯಕ್ತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕೇರಳದ ಕಣ್ಣೂರು ಏರ್ ಪೋರ್ಟ್ ನಲ್ಲಿ ಏರ್ ಇಂಟೆಲಿಜೆನ್ಸ್ ಯುನಿಟ್ ಮತ್ತು ಕಸ್ಟಮ್ ಅಧಿಕಾರಿಗಳು ಪ್ರಯಾಣಿಕನಿಂದ ಸುಮಾರು 14 ಲಕ್ಷ ರೂಪಾಯಿ ಬೆಲೆ ಬಾಳುವ 302 ಗ್ರಾಂ ಚಿನ್ನವನ್ನು ವಶವಡಿಸಿಕೊಂಡಿದ್ದಾರೆ.

ಚಿನ್ನವನ್ನು ಪೇಸ್ಟ್ ರೂಪದಲ್ಲಿ ಜೀನ್ಸ್ ಪ್ಯಾಂಟ್ ಗೆ ಹಚ್ಚಲಾಗಿತ್ತು. ನೋಡಲು ಹಳದಿ ಬಣ್ಣದ ಪೇಂಟ್ ನಂತೆ ಗೋಚರವಾಗುತ್ತಿತ್ತು. ಎರಡು ಲೇಯರ್ ಹೊಂದಿರುವ ಜೀನ್ಸ್ ಪ್ಯಾಂಟ್ ಧರಿಸಿದ ಪ್ರಯಾಣಿಕ ಚಿನ್ನದ ಪೇಸ್ಟ್ ನ್ನು ಹಚ್ಚಿಕೊಂಡು ಕಳ್ಳಸಾಗಾಣೆ ಮಾಡಲು ಪ್ರಯಾಣಿಕರೊಬ್ಬರು ಯತ್ನಿಸಿದ್ದರು. ಈ ವೇಳೆ ಏರ್ ಪೋರ್ಟ್ ನಲ್ಲಿ ಏರ್ ಇಂಟೆಲಿಜೆನ್ಸ್ ಯುನಿಟ್ ತಪಾಸಣೆ ಮಾಡುವ ಸಂದರ್ಭದಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ.