ಪೊಲೀಸರೊಂದಿಗೆ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಕಿರಿಕ್!

86
firstsuddi

ಬೆಂಗಳೂರು : ರಾಜ್ಯದಲ್ಲಿ ನಿನ್ನೆಯಿಂದ ನೈಟ್ ಕರ್ಫ್ಯೂ ಜಾರಿಯಾಗಿದ್ದು, ಈ ಮಧ್ಯೆ ಎಂ.ಜಿ.ರಸ್ತೆಯಲ್ಲಿ ಓಡಾಡುತ್ತಿದ್ದ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಅವರಿಗೆ ಮನೆಗೆ ತೆರಳಿ ಎಂದು ಹೇಳಿದ್ದಕ್ಕೆ ಪೊಲೀಸರೊಂದಿಗೆ ರಂಪಾಟ ಮಾಡಿದ್ದಾರೆ. ಅಲ್ಲದೇ ದಿವ್ಯಾ ಸ್ನೇಹಿತರು ಮಾಧ್ಯಮಗಳ ಕ್ಯಾಮೆರಾ ಕಿತ್ತುಕೊಳ್ಳಲು ಮುಂದಾಗಿದ್ದರು ಎಂದು ಹೇಳಲಾಗುತ್ತಿದೆ.

ಪೊಲೀಸರು ದಿವ್ಯ ಸುರೇಶ್ ಜೊತೆ ಮಾತನಾಡುತ್ತಿದ್ದ ವೇಳೆ ದಿವ್ಯ ಸುರೇಶ್ ಕ್ಯಾಮೆರಾ ಕಂಡು ಆಟೋ ಹತ್ತಿ ತೆರಳಿದ್ದಾರೆ.