ಪೊಲೀಸ್ ಕಾನ್ಸ್ ಟೇಬಲ್ ನಿಂದ ನಿರಂತರ ಅತ್ಯಾಚಾರ – ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ…

103
firstsuddi

ಲಕ್ನೋ : ಪೊಲೀಸ್ ಕಾನ್ಸ್ ಟೇಬಲ್‍ನೋರ್ವ 25 ವರ್ಷದ ಯುವತಿ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದು, ಇದರಿಂದ ಮನನೊಂದ ಆಕೆ ಗಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಉತ್ತರಪ್ರದೇಶದ ಮಿರ್ಜಾಪುರದಲ್ಲಿ ಘಟನೆ ನಡೆದಿದೆ. ಅತ್ಯಾಚಾರವೆಸಗಿರುವ ಪೊಲೀಸ್ ಪೊಲೀಸ್ ಕಾನ್ಸ್ ಟೇಬಲ್‍ ಯುವತಿಯ ಚಿಕ್ಕಪ್ಪನಾಗಿದ್ದು, ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದು ಬಂದಿದೆ. ಇದರಿಂದ ಮನನೊಂದು ಗಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಪೊಲೀಸರು ಹಾಗೂ ಸಾರ್ವಜನಿಕರು ರಕ್ಷಿಸಿದ್ದಾರೆ ಎಂದು ಡಿಸಿಪಿ ಪ್ರಮೋದ್ ಕುಮಾರ್ ತಿಳಿಸಿದ್ದಾರೆ.

2019ರಲ್ಲಿ ಅಲಹಾಬಾದ್ ನಲ್ಲಿ ನಡೆದ ಕುಂಭಮೇಳದಲ್ಲಿ ಭಾಗಿಯಾಗಲು ಟ್ರಾಫಿಕ್ ಹೆಡ್ ಪೊಲೀಸ್ ಪೊಲೀಸ್ ಕಾನ್ಸ್ ಟೇಬಲ್‍ ಆಗಿರುವ ಚಿಕ್ಕಪ್ಪ ಆಕೆಯನ್ನು ಕರೆಯಿಸಿಕೊಂಡಿದ್ದ. ಬಳಿಕ ಹೋಟೆಲ್ವೊಂದಕ್ಕೆ ಕರೆದುಕೊಂಡು ಹೋಗಿ, ತಂಪು ಪಾನಿಯಲ್ಲಿ ಮತ್ತು ಬರುವ ಔಷಧಿ ನೀಡಿ, ಅತ್ಯಾಚಾರವೆಸಗಿದ್ದಾನೆ. ಇದರ ವಿಡಿಯೋ ಮಾಡಿ, ಮೇಲಿಂದ ಮೇಲೆ ಬ್ಲಾಕ್ಮೇಲ್ ಮಾಡಿ, ಮೇಲಿಂದ ಮೇಲೆ ಅತ್ಯಾಚಾರವೆಸಗಿದ್ದಾನೆಂದು ದೂರಿನಲ್ಲಿ ಆರೋಪಿಸಿದ್ದಾಳೆ.

ಯುವತಿ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಮಾತ್ರೆ ನೀಡಿ ಮಗುವನ್ನು ತೆಗೆಯಲು ಹೇಳಿದ್ದಾರೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ. ಕಳೆದ ಭಾನುವಾರ ಸಹ ಆರೋಪಿ ಹಾಗೂ ಆತನ ಮಗ ಖಾನ್ ಪುರದ ಚಕೇರಿ ಪ್ರದೇಶಕ್ಕೆ ಯುವತಿಯನ್ನು ಕರೆದೊಯ್ದು ಮತ್ತೆ ವೀಡಿಯೋ ಚಿತ್ರೀಕರಿಸಿ, ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಅಲ್ಲದೆ ಯುವತಿ ಇದಕ್ಕೆ ವಿರೋಧಿಸಿದ್ದಕ್ಕೆ ಹೊಡೆದು ಚಿತ್ರಹಿಂಸೆ ನೀಡಿ, ಕೊಲೆ ಬೆದರಿಕೆ ಹಾಕಿದ್ದಾರೆ. ಇಲ್ಲಿಂದ ತಪ್ಪಿಸಿಕೊಂಡು ಬಂದ ಯುವತಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ, ನದಿಗೆ ಹಾರಿದ್ದಾಳೆ. ಆದರೆ ಪಿಆರ್ ವಿ ಸಿಬ್ಬಂದಿ ಯುವತಿ ರಕ್ಷಿಸಿದ್ದಾರೆ.

ಟ್ರಾಫಿಕ್ ಪೊಲೀಸ್ ಪೊಲೀಸ್ ಕಾನ್ಸ್ ಟೇಬಲ್‍ ಹಾಗೂ ಮಗನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಇಬ್ಬರನ್ನೂ ಇನ್ನೂ ಬಂಧಿಸಲಾಗಿಲ್ಲ. ಕೋರ್ಟ್ ನಲ್ಲಿ ಯುವತಿಯ ಹೇಳಿಕೆ ದಾಖಲು ಮಾಡಿದ ನಂತರ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಬಂಧನ ಮಾಡಲಾಗುವುದು ಎಂದು ಪ್ರಮೋದ್ ಕುಮಾರ್ ತಿಳಿಸಿದ್ದಾರೆ.