ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ನಿರೂಪಕನ ಕಪಾಳಕ್ಕೆ ಹೊಡೆದ ನಟ ವಿಲ್ ಸ್ಮಿತ್.

119
firstsuddi

ನವದೆಹಲಿ : ನಿನ್ನೆ ರಾತ್ರಿ ನಡೆದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ವೇದಿಕೆ ಮೇಲೆಯೇ ನಟ ವಿಲ್ ಸ್ಮಿತ್ ಕಾರ್ಯಕ್ರಮದ ನಿರೂಪಕನ ಕಪಾಳಕ್ಕೆ ಹೊಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿಯನ್ನು ವಿತರಿಸಲು ಕ್ರಿಸ್ ರಾಕ್ ಅವರನ್ನು ವೇದಿಕೆಗೆ ಕರೆಯಲಾಗಿತ್ತು. ಈ ವೇಳೆ ಅವರು ಸುಮ್ಮನಿರಲಾರದೇ ನಟ ವಿಲ್ ಸ್ಮಿತ್ ರ ಪತ್ನಿ ಜಡಾ ಪಿಂಕೆಟ್ ಸ್ಮಿತ್ ರ ಬೋಳು ತಲೆಯ ಬಗ್ಗೆ ತಮಾಷೆ ಮಾಡಿದ್ದಾರೆ. ಜಡಾ ನೀವು ಬೋಳು ತಲೆಯಲ್ಲಿ ನಟಿಸಿದ ಸಿನಿಮಾ ಜಿಐ ನೋಡಲು ಇಷ್ಟಪಡುತ್ತೇನೆ ಎಂದಾಗ ಅದನ್ನು ಕೇಳಿ ಇಡೀ ಸಭಾಂಗಣ ಜೋರಾಗಿ ನಕ್ಕಿತು.

ಮೊದ ಮೊದಲು ಅದನ್ನು ತಮಾಷೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅದು ತಮಾಷೆ ಆಗಿರಲಿಲ್ಲ. ತಮ್ಮ ಪತ್ನಿಯು ತಲೆಬೋಳಿಸಿಕೊಂಡಿರುವ ವಿಚಾರವನ್ನು ಕ್ರಿಸ್ ರಾಕ್ ತಮಾಷೆ ಮಾಡಿದ್ದಕ್ಕೆ ವಿಲ್ ಸ್ಮಿತ್ ಅತೀವ ಕೋಪಕೊಂಡಿದ್ದರು. ಕೂಡಲೇ ವೇದಿಕೆ ಏರಿದ ವಿಲ್ ಸ್ಮಿತ್ ಕೋಪದಿಂದಲೇ ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದ್ದಾರೆ. ಬಳಿಕ ‘ನನ್ನ ಪತ್ನಿಯ ಬಗ್ಗೆ ಮಾತಾಡಬೇಡ, ನಿನ್ನ ಕೆಟ್ಟ ಬಾಯಿಂದ ಅವಳ ಹೆಸರು ಹೇಳೂ ಬೇಡ’ ಎಂದು ಕಿರುಚಿದರು. ಇದರಿಂದ ಕೆಲಹೊತ್ತು ಕಾರ್ಯಕ್ರಮದಲ್ಲಿ ಗಲಿಬಿಲಿ ಉಂಟಾಗಿದೆ. ಅಲ್ಲದೇ ಇದು ಕಾರ್ಯಕ್ರಮದ ಭಾಗವಾಗಿ ಈ ಸ್ಕ್ರಿಪ್ಟ್ ಮಾಡಲಾಗಿದೆಯಾ ಎಂಬ ಅನುಮಾನವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಆಸ್ಕರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಟ ವಿಲ್ ಸ್ಮಿತ್ ತಮ್ಮ ‘ಕಿಂಗ್ ರಿಚರ್ಡ್’ ಚಿತ್ರದಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ಪಡೆದಿದ್ದಾರೆ.