ಮೂಡಿಗೆರೆ: ತಾಲ್ಲೂಕಿನ ಸಂಸದರ ಆದರ್ಶ ಗ್ರಾಮ ದಾರದಹಳ್ಳಿಯ ಸರ್ಕಾರಿ ಫ್ರೌಢಶಾಲೆ ಬಿರುಕು ಬಿಟ್ಟಿದ್ದು ಜೀವ ಭಯದಲ್ಲಿ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ . ಆದರೆ ಅದರ ದುರಸ್ತಿಯತ್ತ ಮಾತ್ರ ಜನ ಪ್ರತಿನಿಧಿಗಳು ಗಮನಹರಿಸದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಸಂಸದೇ ಶೋಭಾ ಕರಾಂದ್ಲಾಜೆ ಅವರೆ ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ ಎಂದು ಗ್ರಾಮಸ್ಥರು ಸಂಸದರಿಗೆ ಶಾಪ ಹಾಕುತ್ತಿದ್ದಾರೆ ಎಂಬ ಸುದ್ದಿ ಫಸ್ಟ್ ಸುದ್ದಿಯಲ್ಲಿ ಪ್ರಕಟವಾದ ಬೆನ್ನಲ್ಲಿ ಜಿಲ್ಲಾಧಿಕಾರಿ ಬುಗಾದಿ ಗೌತಮ್ ಅವರು ಡಿಡಿಪಿಐ ಅವರೊಂದಿಗೆ ಚರ್ಚಿಸಿ ತಕ್ಷಣವೇ ವಿದ್ಯಾರ್ಥಿಗಳನ್ನು ಬೇರೆ ಕಟ್ಟಡಕ್ಕೆ ವರ್ಗಾಯಿಸುವುದರ ಮೂಲಕ ತಮ್ಮ ಮಾನವಿಯತೆಯನ್ನು ಮೆರೆದಿದ್ದಾರೆ.
ಇಂಥಹ ಸುದ್ದಿಗಳು ಪ್ರಕಟಿಸಿ ತಮ್ಮ ಗಮನಕ್ಕೆ ತಂದ ಫಸ್ಟ್ ಸುದ್ದಿ ಬಗ್ಗೆ ಅಭಿನಂದನೆಗಳನ್ನು ವ್ಯಕ್ತಪಡಿಸಿದ ಅಧಿಕಾರಿಗಳ ತಂಡ. ಅತಿವೃಷ್ಠಿ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಜನಪತ್ರಿನಿದಿಗಳು ಹಾಗೂ ನಮ್ಮುಡುಗ್ರ ತಂಡ ಶ್ರಮದಿಂದ ಹಲವರ ಜೀವ ಉಳಿಸಲು ಸಾಧ್ಯವಾಗುವುದರೊಂದಿಗೆ ಮಾಧ್ಯಮಗಳ ವರದಿಯಿಂದ ರಾಜ್ಯದ ಜನರು ತಮ್ಮ ಕೈಲಾದ ಸೇವೆಯನ್ನು ಸಲ್ಲಿಸುವ ಮೂಲಕ ಮಲೆನಾಡಿಗರಿಗೆ ಹೃದಯ ಸ್ಪೂರ್ತಿಯಾಗಿ ನೆರವಾಗಿದ್ದಾರೆ ಎಂದು ಪರೀಕ್ಷಿತ್ ಜಾವಳಿ ಅಭಿನಂದನೆಗಳನ್ನು ಫಸ್ಟ್ ಸುದ್ದಿಯ ಮೂಲಕ ಸಲ್ಲಿಸಿದ್ದಾರೆ.










