ಫಾಜಿಲ್ ಕೊಲೆ ಪ್ರಕರಣ ; ಆರು ಮಂದಿ ಹಂತಕರು ಅರೆಸ್ಟ್…

46
firstsuddi

ಮಂಗಳೂರು : ಸುರತ್ಕಲ್ ನಲ್ಲಿ ನಡೆದ ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ .

ಬಂಧಿತರನ್ನು ಶ್ರೀನಿವಾಸ ಕಾಟಿಪಳ್ಳ(23), ಅಭಿಷೇಕ್(23) ದೀಕ್ಷಿತ್ ಕಾಟಿಪಳ್ಳ(21), ಸುಹಾಸ್ ಶೆಟ್ಟಿ( 29), ಮೋಹನ್(23) ಮತ್ತು ಗಿರೀಶ್(27) ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದೆ ಕಾರನ್ನು ದುಷ್ಕರ್ಮಿಗಳಿಗೆ ನೀಡಿದ್ದ ಅಜಿತ್ ಕ್ರಾಸ್ತಾ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. 

ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹತ್ಯೆ ನಡೆಸಿದವರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಮಂಗಳಪೇಟೆ ನಿವಾಸಿ ಮಹಮ್ಮದ್ ಫಾಜಿಲ್ (23) ಹತ್ಯೆಯಾಗಿದ್ದ ಯುವಕನಾಗಿದ್ದು, ಈತ ಬುಲೆಟ್ ಟ್ಯಾಂಕರ್ ನಲ್ಲಿ ಪಾರ್ಟ್ ಟೈಮ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಮೂರು ದಿನಕ್ಕೆ 15 ಸಾವಿರ ಬಾಡಿಗೆ ಕೊಡ್ತೇವೆ ಎಂದು ಹಂತಕರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅಜಿತ್ ಕ್ರಾಸ್ತಾ ಎಂಬ ಕಾರಿನ ಮಾಲೀಕ ಹಣದ ಆಸೆಗೆ ಕಾರು ಕೊಟ್ಟಿದ್ದ ಎಂದು ಶಶಿಕುಮಾರ್ ತಿಳಿಸಿದ್ದಾರೆ.

ಮಾಲೀಕನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಗಾಡಿ ಪಡೆದವರು ಯಾರೆಂದು ಗೊತ್ತಾಗುತ್ತೆ. ಒಟ್ಟು 6 ಮಂದಿಯನ್ನು ಪ್ರಕರಣದಲ್ಲಿ ಬಂಧಿಸಿದ್ದೇವೆ. ಜುಲೈ 26 ರಂದು ರಾತ್ರಿ ಬಜ್ಪೆ ನಿವಾಸಿ ಸುಹಾಸ್, ಅಭಿಷೇಕ್ ಗೆ ಕರೆ ಮಾಡುತ್ತಾನೆ. ಜುಲೈ.27 ರಂದು ಮಧ್ಯಾಹ್ನದ ಒಳಗೆ ಯಾರನ್ನಾದರು ಹೊಡೀಬೇಕು ಎಂದು ಪ್ಲಾನ್ ಮಾಡಿದ್ದಾನೆ. ಅಂತೆಯೇ ಸುಹಾಸ್, ಅಭಿಷೇಕ್, ಶ್ರೀನಿವಾಸ್ ಹಾಗೂ ದೀಕ್ಷಿತ್ ಪ್ಲಾನ್ ಮಾಡುತ್ತಾರೆ. ಮಹಮ್ಮದ್ ಫಾಜಿಲ್ ಹೊಡಿಬೇಕು ಎಂದು ಸ್ಕೆಚ್ ಹಾಕುತ್ತಾರೆ. ಜುಲೈ.28 ರಂದು ಸುಹಾಸ್ ಮಾರಕಾಸ್ತ್ರದ ಜೊತೆ ಕಾರಿನಲ್ಲಿ ತೆರಳುತ್ತಾನೆ. 

ಈ ಮಧ್ಯೆ ಆರೋಪಿಗಳು 3-4 ಮಂಕಿ ಕ್ಯಾಪ್ ಖರೀದಿಸುತ್ತಾರೆ. ಹತ್ಯೆಗೂ ಮುನ್ನ ಸುರತ್ಕಲ್ ಹತ್ಯೆ ಜಾಗದಲ್ಲಿ ಮೂರು ಬಾರಿ ಓಡಾಟ ನಡೆಸುತ್ತಾರೆ. ಬಳಿಕ ರಾತ್ರಿ ಶ್ರೀನಿವಾಸ್, ಮೋಹನ್ ಮತ್ತು ಸುಹಾಸ್ ಮಾರಕಾಸ್ತ್ರ ಹಿಡಿದು ಕಾರಿನಿಂದ ಇಳಿದು ಫಾಜಿಲ್ ಮೇಲೆ ದಾಳಿ ಮಾಡುತ್ತಾರೆ. ಗಿರಿಧರ್ ಕಾರು ಚಾಲಕನಾಗಿದ್ದು, ದೀಕ್ಷಿತ್ ಕಾರಿನಲ್ಲೇ ಇದ್ದ ಹಾಗೂ ಅಭಿಷೇಕ್ ಕಾರಿನಿಂದ ಇಳಿದು ಸುತ್ತಮುತ್ತ ಅಲರ್ಟ್ ಮಾಡುತ್ತಾನೆ. 6 ಜನ ಆರೋಪಿಗಳೂ ಒಂದೇ ಇಯಾನ್ ಕಾರ್ ನಲ್ಲಿ ಬಂದಿದ್ರು. ಹತ್ಯೆ ಮಾಡಿ ಆರೂ ಜನರು ಇನ್ನಾ ಭಾಗಕ್ಕೆ ತೆರಳಿ ಕಾರು ನಿಲ್ಲಿಸುತ್ತಾರೆ. ಬಳಿಕ ಸ್ನೇಹಿತನ ಮೂಲಕ ಮತ್ತೊಂದು ಕಾರು ತರಿಸಿ ಎಸ್ಕೇಪ್ ಆಗುತ್ತಾರೆ.

ಉಡುಪಿಯ ಉದ್ಯಾವರ ಬಳಿ ಆರು ಆರೋಪಿಗಳನ್ನ ಬೆಳಗ್ಗೆ ಬಂಧಿಸಲಾಗಿದೆ. ಸದ್ಯ ಆರೂ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಸುರತ್ಕಲ್ ನಲ್ಲಿ ಬೇರೆಯವರನ್ನು ಹತ್ಯೆ ಮಾಡಲು ಹೋಗಿ ಫಾಜಿಲ್ ಕೊಲೆ ಮಾಡಿದ್ದರು ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಹಂತಕರು ಕೃತ್ಯಕ್ಕೆ ಮೊದಲು ಚರ್ಚೆಯ ವೇಳೆ ಆರರಿಂದ ಏಳು ಜನಕ್ಕೆ ಹೊಡೆಯುವ ಬಗ್ಗೆ ನಿರ್ಧರಿಸಿ ಅಂತಿಮವಾಗಿ ಫಾಜಿಲ್ ಗೆ ಗುರಿ ಇಟ್ಟಿದ್ದರು ಎಂದರು.

ಬೆಳ್ಳಾರೆ ಪ್ರವೀಣ್ ಘಟನೆ ನಡೆದ ದಿನ ರಾತ್ರಿ ಮತ್ತು ಮರುದಿನ ಯಾರಿಗಾದರೂ ಹೊಡೆಯಬೇಕೆಂದು‌ ನಿರ್ಧರಿಸಿದ್ದರು. ಆದರೆ ಪ್ರವೀಣ್ ಕೊಲೆಗೆ ಪ್ರತೀಕಾರಕ್ಕಾಗಿಯೇ ನಡೆದಿದೆ ಎಂಬುದನ್ನು ಈಗ ಸ್ಪಷ್ಟವಾಗಿ ಹೇಳಲಾಗದು ಎಂದು ಕಮಿಷನರ್ ತಿಳಿಸಿದ್ದಾರೆ.