ಬಂಜಾರ ಸಮುದಾಯದ ವಿಶ್ವದ ಏಕೈಕ ಜಗದ್ಗುರು ರಾಮರಾವ್ ಮಹಾರಾಜ್ ನಿಧನ…

174
firstsuddi

ಮುಂಬೈ : ಬಂಜಾರ ಸಮುದಾಯದ ವಿಶ್ವದ ಏಕೈಕ ಜಗದ್ಗುರು ಶ್ರೀ ಶ್ರೀ ರಾಮರಾವ್ ಮಹಾರಾಜ್(90) ಅವರು ನಿಧನರಾಗಿದ್ದಾರೆ. ಮಹಾರಾಷ್ಟ್ರದಲ್ಲಿರುವ ಪೌರಾಗಢದ ಪೀಠಧಿಪತಿಗಳಾಗಿದ್ದ ಶ್ರೀರಾಮರಾವ್ ಮಹಾರಾಜ್ ಬಂಜಾರರ ಕುಲಗುರು ಸಂತ ಸೇವಾಲಾಲರ ಕುಲದವರಾಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಮರಾವ್ ಮಹಾರಾಜ್ ಅವರು ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ. ಜಗದ್ಗುರುಗಳ ನಿಧನಕ್ಕೆ ಗುಲ್ಬರ್ಗ ಸಂಸದ ಡಾ.ಉಮೇಶ ಜಾಧವ ಸೇರಿದಂತೆ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.