ಬಟಿಂಡಾ ಮಿಲಿಟರಿ ಠಾಣೆಯೊಳಗೆ ಗುಂಡಿನ ದಾಳಿ – ನಾಲ್ಕು ಮಂದಿ ಸಾವು…

61
firstsuddi

ಚಂಡೀಗಢ : ಪಂಜಾಬ್ ನ ಬಟಿಂಡಾ ಸೇನಾ ಠಾಣೆಯೊಳಗೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

ಇಂದು ಮುಂಜಾನೆ ಬಟಿಂಡಾ ಮಿಲಿಟರಿ ಸ್ಟೇಷನ್ ಒಳಗೆ ಗುಂಡಿನ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಘಟನೆಯ ನಂತರ ಸ್ಟೇಷನ್ ಕ್ವಿಕ್ ರಿಯಾಕ್ಷನ್ ತಂಡಗಳನ್ನು ಸಕ್ರಿಯಗೊಳಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಬಿಗಿ ಭದ್ರತೆ ನೀಡಲಾಗಿದ್ದು, ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದಿದೆ.

ರಾಜ್ಯದಲ್ಲಿ ಬೈಸಾಖಿ ಆಚರಣೆ ನಡೆಯಲಿರುವ ಮಧ್ಯೆಯೇ ಈ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್ 14ರಿಂದ ಬೈಸಾಖಿ ಹಬ್ಬ ಆರಂಭವಾಗಲಿದೆ. ಜನರು ಯಾವುದೇ ಆತಂಕಪಡಬೇಕಿಲ್ಲ. ಸೂಕ್ತ ಭದ್ರತೆ ನೀಡಲಾಗಿದೆ. ದಾಳಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ) ಸುರೀಂದರ್ ಪಾಲ್ ಸಿಂಗ್ ಪರ್ಮಾರ್ ತಿಳಿಸಿದ್ದಾರೆ.