ಬಣಕಲ್:ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸೋಣ :ಶಿಕ್ಷಕ ವಸಂತ್ ಹಾರ್ಗೋಡು.

626

ಬಣಕಲ್:ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಿದರೇ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವುದರ ಜೊತೆಗೆ ಸದೃಡ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿದ್ಯಾಭಾರತಿ ಶಾಲೆಯ ಶಿಕ್ಷಕ ವಸಂತ್ ಹಾರ್ಗೋಡು ಹೇಳಿದರು.
ಶ್ರೀವಿದ್ಯಾಭಾರತಿ ಶಾಲೆಯಲ್ಲಿ ನಡೆದ ವಿದ್ಯಾರ್ಥಿ ಸಂಸತ್ ಚುನಾವಣೆಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಶಾಲಾಹಂತದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುವುದರಿಂದ ಮಕ್ಕಳಿಗೆ ಚುನಾವಣೆ ಪ್ರಕ್ರಿಯೆಯ ಬಗ್ಗೆ ಒಂದು ಸ್ಪಷ್ಟವಾದ ಚಿತ್ರಣ ದೊರಕುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಮಹತ್ವ ಮತ್ತು ಮತದಾನದ ಅಗತ್ಯತೆಗಳು ಮನದಟ್ಟಾಗುತ್ತದೆ ಎಂದರು.
ಮುಖ್ಯ ಶಿಕ್ಷಕಿ ಟಿ.ಆರ್ ಮಾಲತಿ ಮಾತನಾಡಿ ಶಾಲೆಯಲ್ಲಿ ಚುನಾವಣೆ ಪ್ರಕ್ರಿಯೆಯ ಮೂಲಕ ಕೆಲ ಜವಾಬ್ದಾರಿಯನ್ನು ನಿಭಾಯಿಸಲು ಕಲಿಸದರೆ ಅದು ಅವರ ಮುಂದಿನ ಬದುಕಿಗೂ ಸಹಾಯಕವಾಗುತ್ತದೆ. ಬದುಕಿನ ಸವಾಲುಗಳನ್ನು ಜವಾಬ್ದಾರಿಯುತವಾಗಿ ಎದುರಿಸಲು ಪ್ರೇರಣೆಯಾಗುತ್ತದೆ ಎಂದರು.
ಶಿಕ್ಷಕ ಭಕ್ತೇಶ್ ಮಾತನಾಡಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮಕ್ಕಳ ಸರ್ವಾಂಗೀಣ ಏಳಿಗೆಗೆ ಅಗತ್ಯವಾಗಿದ್ದು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹ ನೀಡಬೇಕಿದೆ ಎಂದರು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ನಾಗರಾಜ್, ಶಿಕ್ಷಕರಾದ ಪ್ರತಾಪ್, ಪ್ರಕಾಶ್,ಮನಮೋಹನ್, ಲಿಂಗರಾಜ್, ಭಕ್ತೇಶ್, ಶೇಖರಪ್ಪ, ಲೋಕೇಶ್, ಕುಸುಮಾಶೆಟ್ಟಿ, ರೂಪಾ ಆಚಾರ್ಯ, ಕಮಲಮ್ಮ, ಲೀಲಾಮಣಿ, ರಂಜಿತಾ, ಪ್ರಜ್ಞಾ, ಮೃದುಲಾ ಕವನ, ಆತ್ಮೀಕ, ಇಂದಿರಾ, ಗೀತಾ, ಇದ್ದರು.