ಬಾಳೆ ಎಲೆಯಲ್ಲಿ ಮೋದಿ ಚಿತ್ರ ಬಿಡಿಸಿದ ಕಲಾವಿದ…

31
firstsuddi

ಧಾರವಾಡ : ಪ್ರಧಾನಿ ಮೋದಿ ಅವರ ಜನ್ಮ ದಿನದಂದು ಧಾರವಾಡದ ಕಲಾವಿದರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಭಿನ್ನ ರೀತಿಯಲ್ಲಿ ಶುಭಾಶಯ ಹೇಳಿದ್ದಾರೆ.

ಕಲಗೇರಿ ಬಡಾವಣೆಯವರಾದ ಮಂಜುನಾಥ ಹಿರೇಮಠ ಅವರು ಸುಮಾರು ಎರಡು ಅಡಿಯಷ್ಟು ಉದ್ದದ ಬಾಳೆ ಎಲೆಯ ಮಧ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಕೆತ್ತಿ ವಿಶೇಷವಾಗಿ ವಿಶ್ ಮಾಡಿದ್ದಾರೆ. ಮಂಜುನಾಥ್ ಅವರ ಪ್ರತಿಭೆ ನೊಡಿ ಸ್ಥಳೀಯರು ಖುಷಿ ಪಟ್ಟಿದ್ದಾರೆ.

ಮಂಜುನಾಥ ಹಿರೇಮಠ ಕೇವಲ ಪರಿಸರ ಸ್ನೇಹಿ ಗಣೇಶನ ವಿಗ್ರಹಗಳನ್ನು ತಯಾರಿಸುವಲ್ಲಷ್ಟೇ ಹೆಸರು ಗಳಿಸಿಲ್ಲ. ಬದಲಿಗೆ ಮರಳು ಕಲೆ ಸೇರಿದಂತೆ ಅನೇಕ ಬಗೆಯ ಕಲೆಗಳಲ್ಲಿ ನೈಪುಣ್ಯತೆ ಹೊಂದಿದ್ದಾರೆ.