ಬಿಎಸ್ ವೈ ಮತ್ತೆ ಜೈಲಿಗೆ ಹೋಗ್ಬಾರ್ದು ಅನ್ನೋದು ನನ್ನ ಆಶಯ : ಹೆಚ್.ವಿಶ್ವನಾಥ್.

89
firstsuddi

ಬೆಂಗಳೂರು : ಈ ಹಿಂದೆ ಕುಟುಂಬದಿಂದಾಗಿ ಯಡಿಯೂರಪ್ಪ ಜೈಲಿಗೆ ಹೋಗಿದ್ದರು. ಈಗ ಮತ್ತೊಮ್ಮೆ ಜೈಲಿಗೆ ಹೋಗಬಾರದು. ಈ ಕಳಕಳಿಯ ಮೇಲೆ ಹೈಕಮಾಂಡ್ ಗಮನಕ್ಕೆ ತರಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಅವರು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಎಸ್ ವೈ ಅವರಿಗೆ ವಯಸ್ಸು ಸಹಕರಿಸುತ್ತಿಲ್ಲ. ಹೀಗಾಗಿ ನಾಯಕತ್ವ ಬದಲಾವಣೆ ಆಗಬೇಕೆಂದು ಒತ್ತಾಯಿಸಿದ್ದೇನೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಎಲ್ಲಾ ಇಲಾಖೆಯಲ್ಲಿ ವಿಜಯೇಂದ್ರ ಹಸ್ತಕ್ಷೇಪವಿದೆ. ಯಾವ ಮಂತ್ರಿ ಕೂಡಾ ಸಮಾಧಾನವಾಗಿಲ್ಲ. ನೀರಾವರಿ ಯೋಜನೆಯಲ್ಲಿ ಭ್ರಷ್ಟಾಚಾರವಾಗಿದೆ. 20 ಸಾವಿರ ಕೋಟಿಯ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ವಿಜಯೇಂದ್ರ ಕಿಕ್ ಬ್ಯಾಕ್ ಪಡೆದಿದ್ದಾರೆ. ಜಾರಿ ನಿರ್ದೇಶನಾಲಯದಲ್ಲಿಯೂ ಅವರ ವಿರುದ್ಧ ದೂರು ದಾಖಲಾಗಿದ್ದು, ಇದೇ ವಿಚಾರಕ್ಕೆ ಪದೇ ಪದೇ ದೆಹಲಿಗೆ ತೆರಳುತ್ತಾರೆ ಎಂದು ಮಾಹಿತಿ ಬಹಿರಂಗಪಡಿಸಿದ್ದಾರೆ.

ರಾಜ್ಯ ಉಸ್ತುವಾರಿ ಜೊತೆಗಿನ ಒನ್ ಟು ಒನ್ ಸಭೆಯಲ್ಲಿ ಶೇಕಡ 80ರಷ್ಟು ಶಾಸಕರು ನಾಯಕತ್ವ ಬದಲಾವಣೆ ಕೇಳಿದ್ದಾರೆ. ಆದರೆ ಹೊರಗೆ ಬಂದು ಹೇಳಲು ಧೈರ್ಯ ಇಲ್ಲ ಎಂದರು. ಜಿಂದಾಲ್ಗೆ ಭೂಮಿ ಪರಭಾರೆ ಬಗ್ಗೆ ಮೊದಲು ದನಿ ಎತ್ತಿದ್ದೇ ನಾನು. ಸಿದ್ದರಾಮಯ್ಯ, ಕುಮಾರಸ್ವಾಮಿ ಏನು ಬಾಯಿಬಿಟ್ಟಿದ್ದಾರಾ? ಕಿಕ್ ಬ್ಯಾಕ್ ಪಡೆದು ಎಲ್ಲರೂ ಸುಮ್ಮನಾಗಿದ್ದಾರೆ. ಇಲ್ಲಿ ಮೂರು ಪಕ್ಷಗಳು ಅಧಿಕಾರ ನಡೆಸುತ್ತಿವೆ ಎಂಬುದು ಸತ್ಯ. ಈ ಸಂಬಂಧ ಸಿ.ಪಿ ಯೋಗೀಶ್ವರ್ ಹೇಳಿದ್ದು ಸತ್ಯವಾಗಿದೆ ಎಂದರು.

ಮೊದಲ ಬಾರಿ ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ರೇಣುಕಾಚಾರ್ಯ ಹೈದರಾಬಾದ್ ಗೆ ಹೋಗಿದ್ದನ್ನು ಮರೆತಿದ್ದಾರೆ. ನರ್ಸ್ ಜಯಲಕ್ಷ್ಮಿ ಪ್ರಕರಣವನ್ನು ಮರೆತಿದ್ದಾರೆ. ಸ್ನೇಹಿತನ ಮನೆಗೆ ಊಟಕ್ಕೆ ಹೋಗಿದ್ದ ಹಾಲಪ್ಪ ಅಲ್ಲಿ ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಮಾಡಿದ್ದ. ಈ ರೀತಿಯ ವ್ಯಕ್ತಿಯಾದ ನೀವು ಈಗ ನಾನು ಉಂಡಮನೆಗೆ ಮದ್ದು ಹಾಕುತ್ತೇನೆ ಎಂದು ಹೇಳುತ್ತೀಯಾ? ವಿಶ್ವನಾಥ್ ನನ್ನನ್ನು ಅರೆಹುಚ್ಚ ಎಂದಿದ್ದಾರೆ. ನನ್ನಂತಹ ಅರೆಹುಚ್ಚನಿಂದಲೇ ನೀನು ಬಿಡಿಎ ಅಧ್ಯಕ್ಷ ಆಗಿದ್ದೀಯಾ? 10 ಸಾವಿರ ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ನಲ್ಲಿ ಎಷ್ಟು ಹಣ ಹೊಡೆದಿದ್ದೀಯಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.