ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಮೇಲೆ ಬಿಯರ್ ಬಾಟಲ್‍ನಿಂದ ಹಲ್ಲೆ…

63
firstsuddi

ಬೆಂಗಳೂರು : ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಲಾಗಿದೆ.

ನಿನ್ನೆ ತಡರಾತ್ರಿ ಸದಾಶಿವನಗರ ಬಳಿಯ ಹ್ಯಾಮರ್ಡ್ ಕ್ಲಬ್ ಗೆ ಸ್ನೇಹಿತರ ಜತೆ ಕಿರಿಕ್ ಕೀರ್ತಿ ಅವರು ತೆರಳಿದ್ದರು. ಈ ವೇಳೆ ಪಕ್ಕದ ಟೇಬಲ್ ನಲ್ಲಿದ್ದ ವ್ಯಕ್ತಿಯೊಬ್ಬ ಕೀರ್ತಿ ಅವರ ಫೋಟೋ ಕ್ಲಿಕ್ಕಿಸಿದ್ದ. ಫೋಟೋ ಕ್ಲಿಕ್ಕಿಸಿದ್ದನ್ನು ಕೀರ್ತಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ, ಇಬ್ಬರ ನಡುವೆ ನಡೆದ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿದೆ. ಇದರಿಂದ ಕೋಪಗೊಂಡ  ವ್ಯಕ್ತಿಯು ಕಿರಿಕ್ ಕೀರ್ತಿಯ ತಲೆಗೆ ಬಿಯರ್ ಬಾಟಲ್‍ನಿಂದ ಹಲ್ಲೆ ಮಾಡಿದ್ದಾನೆ.

ಆಸ್ಪತ್ರೆಯೊಂದರಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿರುವ ಕೀರ್ತಿ ಅವರು, ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ.