ಬಿಜೆಪಿ ನಾಯಕಿ ಖುಷ್ಬೂ ಚಲಿಸುತ್ತಿದ್ದ ಕಾರಿಗೆ ಟ್ಯಾಂಕರ್ ಡಿಕ್ಕಿ-ಅಪಾಯದಿಂದ ಪಾರು…

173
firstsuddi

ಚೆನ್ನೈ : ನಟಿ ಹಾಗೂ ಬಿಜೆಪಿ ನಾಯಕಿ ನಟಿ ಖುಷ್ಬೂ ತೆರಳುತ್ತಿದ್ದ ಕಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದಿರುವ ಘಟನೆ ತಮಿಳುನಾಡಿನ ಮಧುರಂಥಗಂ ಗ್ರಾಮದ ಬಳಿ ನಡೆದಿದೆ. ನಟಿ ಖುಷ್ಬೂ ಅವರು ವೆಲ್ ಯಾತ್ರೆಯಲ್ಲಿ ಭಾಗಿಯಾಗಲು ಕಡಲೂರಿಗೆ ಸಂಚರಿಸುತ್ತಿದ್ದ ವೇಳೆ ಮೇಲ್ಮರ್ವತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದಿದ್ದು, ಅದೃಷ್ಟಾವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.