ಬೆಂಗಳೂರಿನಲ್ಲಿ ಮಳೆಯ ಅವಾಂತರ – ಜಗ್ಗೇಶ್ ಕಾರು ಮುಳುಗಡೆ…

60
firstsuddi

ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದ ನಗರದಲ್ಲಿ ಸಾಕಷ್ಟು ಅವಾಂತರ ಆಗಿದೆ. ಈ ನಿಮಿತ್ತ ಜನರು ಪರದಾಟ ನಡೆಸಿದ್ದಾರೆ. ಇದೀಗ ಬಿಜೆಪಿ ರಾಜ್ಯಸಭಾ ಸದಸ್ಯ- ನಟ ಜಗ್ಗೇಶ್ ಅವರಿಗೂ ಮಳೆಯ ಅವಾಂತರದ ಬಿಸಿ ತಟ್ಟಿದೆ. ಜಗ್ಗೇಶ್ ಅವರ ಒಡೆತನದ ಐಷಾರಾಮಿ ಕಾರು ಮಳೆಗೆ ಮುಳುಗಿ ಹೋಗಿದೆ.

ಜಗ್ಗೇಶ್ ಅವರ ಮನೆಯ ರಿಪೇರಿ ಕೆಲಸ ಕಾರ್ಯಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಜಗ್ಗೇಶ್ ಅವರು ತಮ್ಮ ಬಿಎಂಡಬ್ಲ್ಯು ಕಾರನ್ನು ಸ್ನೇಹಿತ ಮುರುಳಿ ಮನೆ ಬಳಿ ನಿಲ್ಲಿಸಿದ್ದರು.

ಮಳೆ ತಂದ ಸಂಕಷ್ಟದಿಂದ ಮುರಳಿ ಅವರ ಮನೆ- ಪಾರ್ಕಿಂಗ್‌ಗೆ ನೀರು ನುಗ್ಗಿದೆ. ಈ ಪರಿಣಾಮ ಜಗ್ಗೇಶ್ ಅವರ ಬಿಎಂಡಬ್ಲ್ಯು ಕಾರು ಮುಳುಗಡೆಯಾಗಿದೆ. ಕೊನೆಗೂ ಹೇಗೋ ಸ್ನೇಹಿತ ಮುರಳಿ ಅವರು ಪಂಪ್ ಬಳಸಿ ನೀರು ಹೊರ ಹಾಕುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಜಗ್ಗೇಶ್ ಅವರು ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.

ಜಗ್ಗೇಶ್ ಅವರು ಸಿನಿಮಾ- ರಾಜಕೀಯ ಎರಡರಲ್ಲೂ ಆಕ್ಟೀವ್ ಆಗಿದ್ದಾರೆ. ‘ರಾಘವೇಂದ್ರ ಸ್ಟೋರ್ಸ್ʼ ಸಿನಿಮಾದ ಬಳಿಕ ಭಿನ್ನ ಕಥೆಗಳ ಮೂಲಕ ಬರಲಿದ್ದಾರೆ.