ಬೈಕ್ ,ಆಟೋಗೆ ಡಿಕ್ಕಿ ಹೊಡೆದ ಕಾರು – ಆರು ಮಂದಿ ಸಾವು…

88
firstsuddi

ಗಾಂಧಿನಗರ : ಗುಜರಾತ್ ನ ಆನಂದ್ ಜಿಲ್ಲೆಯ ಸೋಜಿತ್ರಾ ಗ್ರಾಮದ ಬಳಿ ನಿನ್ನೆ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ.

ಕುಟುಂಬಸ್ಥರು ನಿನ್ನೆ ರಕ್ಷಾಬಂಧನ ಆಚರಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಆನಂದ್ ಜಿಲ್ಲೆಯ ಸೋಜಿತ್ರಾ ಬಳಿ ಅಪಘಾತ ಸಂಭವಿಸಿದೆ. ಕಾಂಗ್ರೆಸ್ ಶಾಸಕ ಪುನಂಭಾಯಿ ಮಾಧಭಾಯಿ ಪರ್ಮಾರ್ ಅವರ ಅಳಿಯ ಖೇತನ್ ಪಾಧಿಯಾರ್ ಸಂಚರಿಸುತ್ತಿದ್ದ ಎಸ್ ಯುವಿ ಕಾರು, ಬೈಕ್ ಮತ್ತು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ರಿಕ್ಷಾದಲ್ಲಿದ್ದ ನಾಲ್ವರು ಮತ್ತು ಬೈಕ್ ನಲ್ಲಿದ್ದ ಇಬ್ಬರು ಸೇರಿ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ. ಖೇತನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

ಮೃತರನ್ನು ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಮೂವರು ಸದಸ್ಯರಾದ ವಿನಾ ವಿಪುಲ್ ಮಿಸ್ತ್ರಿ (44) ಆಕೆಯ ಇಬ್ಬರು ಹೆಣ್ಣುಮಕ್ಕಳಾದ ಜಿಯಾ (14), ಜಾನ್ವಿ (17), ರಿಕ್ಷಾ ಚಾಲಕ ಯಾಸಿನ್ ಮೊಹಮ್ಮದ್ ವೋಹ್ರಾ (38), ಬೈಕ್ ನಲ್ಲಿದ್ದ ಯೋಗೇಶ್ ರಾಜೇಶ್ ಓಡ್ (20) ಮತ್ತು ಸಂದೀಪ್ ಠಾಕೂರ್ ಓಡ್ (19) ಎಂದು ಗುರುತಿಸಲಾಗಿದೆ.

ಆನಂದ್ ನ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗುಪ್ತಾ ಮಾತನಾಡಿ, ಆನಂದ್ ನಲ್ಲಿ ರಾತ್ರಿ 7 ಗಂಟೆಗೆ ಕಾರು, ಬೈಕ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ಆಟೋದಲ್ಲಿದ್ದ ನಾಲ್ವರು ಹಾಗೂ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರು ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ.