ಬ್ರಾಹ್ಮಣರೇ ನಿಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ನಾವು ಬರುತ್ತಿದ್ದೇವೆ – ಜೆಎನ್‍ಯು ಗೋಡೆಗಳ ಮೇಲೆ ವಿವಾದಾತ್ಮಕ ಬರಹ…

63
firstsuddi

ನವದೆಹಲಿ : ಜವಹರಲಾಲ್ ನೆಹರು ವಿಶ್ವ ವಿದ್ಯಾಲಯ ಕ್ಯಾಂಪಸ್ ನ ಗೋಡೆಗಳ ಮೇಲೆ ಬ್ರಾಹ್ಮಣ ಮತ್ತು ಬನಿಯಾ ಸಮುದಾಯಗಳ ವಿರುದ್ಧ ಘೋಷಣೆಗಳನ್ನು ಬರೆಯಲಾಗಿದೆ.

ಜೆಎನ್‍ಯು ಇಂಟರ್ ನ್ಯಾಶನಲ್ ಸ್ಟಡೀಸ್- II ಕಟ್ಟಡದ ಗೋಡೆಗಳ ಮೇಲೆ ಬ್ರಾಹ್ಮಣರು ಕ್ಯಾಂಪಸ್ ತೊರೆಯಿರಿ”, “ಬ್ರಾಹ್ಮಣ ಭಾರತ್ ಛೋಡೋ” ಮತ್ತು “ಬ್ರಾಹ್ಮಿನೋ-ಬನಿಯಾಸ್, ನಾವು ನಿಮಗಾಗಿ ಬರುತ್ತಿದ್ದೇವೆ! ನಾವು ಸೇಡು ತೀರಿಸಿಕೊಳ್ಳುತ್ತೇವೆ” ಎಂಬೆಲ್ಲಾ ಆಕ್ಷೇಪಾರ್ಹ ಘೋಷಣೆಗಳಿರುವ ಬರಹಗಳನ್ನು ಬರೆಯಲಾಗಿದೆ. ಎರಡು ಸಮುದಾಯಗಳ ವಿರುದ್ಧದ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕುಲಪತಿ ಶಾಂತಿಶ್ರೀ ಡಿ. ಪಂಡಿತ್ ವಿಭಾಗದ ಕುಂದುಕೊರತೆಗಳ ಸಮಿತಿಯ ಡೀನ್ ಅವರಿಂದ ಈ ಬಗ್ಗೆ ವರದಿ ಕೇಳಿದ್ದಾರೆ. ಅಲ್ಲದೇ ಕ್ಯಾಂಪಸ್ ನಲ್ಲಿ ಈ ಪ್ರತ್ಯೇಕವಾದ ಪ್ರವೃತ್ತಿಯನ್ನು ಖಂಡಿಸುತ್ತೇವೆ. ಜೆಎನ್‍ಯು ಎಲ್ಲರಿಗೂ ಸೇರಿದ್ದು, ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂದು ಕಾಲೇಜಿನ ಅಡ್ಮಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಬಿವಿಪಿ ಕೂಡ ಈ ಘಟನೆಯನ್ನು ಖಂಡಿಸಿದ್ದು, ಎಡಪಕ್ಷಗಳು ವಿಧ್ವಂಸಕ ಕೃತ್ಯವೆಸಗಿವೆ ಎಂದು ಆರೋಪಿಸಿದೆ. ಕಮ್ಯುನಿಸ್ಟ್ ಗೂಂಡಾಗಳು ಶೈಕ್ಷಣಿಕ ಜಾಗವನ್ನು ಧ್ವಂಸಗೊಳಿಸುವುದನ್ನು ಎಬಿವಿಪಿ ಖಂಡಿಸುತ್ತದೆ. ಕಮ್ಯುನಿಸ್ಟರು ಜೆಎನ್‍ಯುನ ಸ್ಕೂಲ್ ಆಫ್ ಇಂಟರ್​ನ್ಯಾಷನಲ್ ಸ್ಟಡೀಸ್- II ಕಟ್ಟಡದ ಗೋಡೆಗಳ ಮೇಲೆ ನಿಂದನೆಗಳನ್ನು ಬರೆದಿದ್ದಾರೆ ಎಂದು ಎಬಿವಿಪಿ ಅಧ್ಯಕ್ಷ ರೋಹಿತ್ ಕುಮಾರ್ ಹೇಳಿದ್ದಾರೆ.