ಭಾರತದಲ್ಲಿ ಭೂಕಂಪನ – ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲೂ ಕಂಪಿಸಿದ ಭೂಮಿ…

49
firstsuddi

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಭೂಕಂಪನ ಸಂಭವಿಸಿದೆ. ಮೂಲಗಳ ಪ್ರಕಾರ 5.9 ರಷ್ಟು ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನದ ಗಡಿಯಲ್ಲೂ ಭೂಕಂಪನ ಉಂಟಾಗಿದೆ. ಪಾಕ್ ನಲ್ಲಿ 5.8 ತೀವ್ರತೆಯ ಭೂಕಂಪನ ಸಂಭವಿಸಿದೆ.

ನಿನ್ನೆ ರಾತ್ರಿ 7:26ರ ಸುಮಾರಿಗೆ ಪಾಕಿಸ್ತಾನದ ಗಿಲ್ಗಿಟ್, ಚಕ್ವಾಲ್, ಲಕ್ಕಿ ಮಾರ್ವಾಟ್, ನೌಶೇರಾ, ಸ್ವಾತ್, ಜೀಲಂ, ಮಲಕಾಂಡ್, ಪಾಕ್ ಪಟ್ಟನ್, ಪೇಶಾವರ, ಲೋವರ್ ದಿರ್, ಚಿತ್ರಾಲ್, ಖೈಬರ್, ವಜಿರಿಸ್ತಾನ್, ಟ್ಯಾಂಕ್, ಬಜೌರ್, ಮರ್ದಾನ್, ಪರಚಿನಾರ್, ಮುರ್ರೆ, ಮನ್ಸೆಹ್ರಾ, ಅಬೋಟಾಬಾದ್, ಮುಲ್ತಾನ್, ಶೇಖುಪುರ, ಚಿನಿಯೋಟ್ ಮತ್ತು ಕೋಟ್ಲಿಯಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಎನ್ಎಸ್ಎಂಸಿ ತಿಳಿಸಿದೆ.

ಭೂಕಂಪನದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಭಾರತ ಹಾಗೂ ಅಫ್ಘಾನಿಸ್ತಾನದಲ್ಲೂ ಇದೇ ರೀತಿಯ ಭೂಕಂಪನವಾಗಿರುವ ಬಗ್ಗೆ ವರದಿಯಾಗಿದ್ದು, ಜಮ್ಮು ಮತ್ತು ಕಾಶ್ಮೀರ ದೆಹಲಿ ಹಾಗೂ ನೆರೆಯ ಎನ್ ಸಿಆರ್ ಪ್ರದೇಶಗಳಲ್ಲಿ ಕಂಪನ ಉಂಟಾಗಿದೆ. ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ. ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಜನರು ಆತಂಕಗೊಂಡು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ.

ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ 173 ಕಿ.ಮೀ ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ಎಂದು ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಸೆಂಟರ್ (ಎನ್ಎಸ್ಎಂಸಿ) ತಿಳಿಸಿದೆ. ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆ ದಾಖಲಾಗಿದೆ.