ನವದೆಹಲಿ : ಭಾರತದ ಮಿಂಚಿನ ಓಟಗಾರ್ತಿ ಹಿಮಾ ದಾಸ್ ಅವರು 200 ಮೀಟರ್ ಓಟದ ಸ್ಪರ್ಧೆಯಲ್ಲಿ ಕೇವಲ 20ದಿನಗಳಲ್ಲಿ 5 ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತಕ್ಕೆ 5ಚಿನ್ನದ ಪದಕವನ್ನು ತಂದುಕೊಟ್ಟ ಹಿಮಾದಾಸ್ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಟ್ವಿಟರ್ ಮೂಲಕ ಅಭಿನಂಧಿಸಿದ್ದು, “ ಕಳೆದ ಕೆಲವು ದಿನಗಳಿಂದ ಹಿಮಾ ದಾಸ್ ಅವರ ಅದ್ಭುತ ಸಾಧನೆಗಳ ಬಗ್ಗೆ ಭಾರತ ಬಹಳ ಹೆಮ್ಮೆಪಡುತ್ತದೆ. ಅವರು ವಿವಿಧ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಐದು ಚಿನ್ನದ ಪದಕಗಳನ್ನು ಭಾರತಕ್ಕೆ ತಂದಿದ್ದಾರೆ ಎಂದು ಎಲ್ಲರೂ ಸಂಪೂರ್ಣವಾಗಿ ಸಂತೋಷಪಡುತ್ತಿದ್ದಾರೆ. ಹಿಮಾ ದಾಸ್ ಅವರಿಗೆ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದು, ನರೇಂದ್ರ ಮೋದಿಯವರ ಟ್ವೀಟ್ಗೆ ಉತ್ತರಿಸಿದ ಹಿಮಾದಾಸ್ ಅವರು “ನಿಮ್ಮ ಶುಭಾಶಯಗಳಿಗಾಗಿ ಧನ್ಯವಾದಗಳು ನರೇಂದ್ರ ಮೋದಿ ಸರ್. ನಾನು ನಿರಂತರ ಶ್ರಮವಹಿಸಿ ನಮ್ಮ ದೇಶಕ್ಕೆ ಹೆಚ್ಚಿನ ಪದಕಗಳನ್ನು ತರುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.










