ಭಾರತ್ ಬಂದ್ : ಏನಿರುತ್ತೆ , ಏನಿರಲ್ಲ? ಇಲ್ಲಿದೆ ಮಾಹಿತಿ…

57
firstsuddi

ಬೆಂಗಳೂರು : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಇಂದು ಭಾರತ್ ಬಂದ್ ಗೆ ಕರೆ ನೀಡಿದ್ದಾರೆ. ಹಾಗಾಗಿ, ರಾಜ್ಯ ರೈತ ಸಂಘಟನೆಗಳು, ವರ್ತಕರು, ಕಾರ್ಮಿಕ, ದಲಿತ, ಕನ್ನಡಪರ, ವಿದ್ಯಾರ್ಥಿ ಸಂಘಟನೆಗಳು, ಬೆಂಬಲ ಸೂಚಿಸಿದ್ದು, ಕೆಲಸ ಕಾರ್ಯಗಳು ಯಥಾಸ್ಥಿತಿಯಲ್ಲಿ ನಡೆಯುತ್ತವೆ. ಬಂದ್ ವೇಳೆ ಏನೇನು ಇರಲಿದೆ, ಏನೇನು ಇರಲ್ಲ ಎಂಬುದರ ಮಾಹಿತಿ ಇಲ್ಲಿದೆ.

ಎಂದಿನಂತೆ ಬಿಎಂಟಿಸಿ, ನಮ್ಮ ಮೆಟ್ರೋ ಸೇವೆಗಳು ಇರಲಿವೆ. ಲಾರಿಗಳ ಓಡಾಟ ಎಂದಿನಂತಿದ್ದು, ಮಾಲೀಕರು ನೈತಿಕ ಬೆಂಬಲವಷ್ಟೇ ನೀಡಲು ತೀರ್ಮಾನಿಸಿದ್ದಾರೆ. ಓಲಾ, ಉಬರ್ ಟ್ಯಾಕ್ಸಿ ಸೇವೆಯೂ ಲಭ್ಯವಿರಲಿದೆ.

ಶಾಲಾ-ಕಾಲೇಜಿಗೆ ಯಾವುದೇ ರಜೆ ಇರುವುದಿಲ್ಲ. ಎಂದಿನಂತೆ ಶಾಲಾ – ಕಾಲೇಜು ತರಗತಿಗಳು ನಡೆಯಲಿವೆ. ಇತ್ತ ಇಂದು ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ನಡೆಯಲಿದ್ದು, ಪರೀಕ್ಷಾರ್ಥಿಗಳು ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಬರುವಂತೆ ಸೂಚಿಸಲಾಗಿದೆ.

ರಾಜ್ಯದಲ್ಲಿ ಎಂದಿನಂತೆ ಹೋಟೆಲ್ & ರೆಸ್ಟೋರೆಂಟ್ ಸೇವೆ ಇರಲಿದೆ. ಹೋಟೆಲ್ ಉದ್ಯಮ, ಬಂದ್ಗೆ ನೈತಿಕ ಬೆಂಬಲವನ್ನಷ್ಟೇ ನೀಡಿದ್ದಾರೆ. ಬೀದಿಬದಿ ವ್ಯಾಪಾರಿಗಳಿಂದ ಬಂದ್ಗೆ ಬೆಂಬಲ ಇಲ್ಲ. ಇಂದು ಎಂದಿನಂತೆ ಕರ್ತವ್ಯ ನಿರ್ವಹಿಸಲು ಬೀದಿ ಬದಿ ವ್ಯಾಪಾರಿಗಳು ನಿರ್ಧರಿಸಿದ್ದಾರೆ.