ಮಂಗಳೂರು : ಜನವರಿ ಮೊದಲ ವಾರ ಕರಾವಳಿ ಉತ್ಸವ – ಜಿಲ್ಲಾಧಿಕಾರಿ ಸಿಂದೂ ಬಿ ರೂಪೇಶ್.

256
firstsuddi

ಮಂಗಳೂರು : ಮುಂಬರುವ ಜನವರಿ ಮೊದಲ ವಾರದಲ್ಲಿ ಕರಾವಳಿ ಉತ್ಸವ ನಡೆಸಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಸಿಂದೂ ಬಿ ರೂಪೇಶ್ ತಿಳಿಸಿದರು. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರಾವಳಿ ಉತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದರು. ಕರಾವಳಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಾಕರ್ಷಿಸುವಂತಾಗಬೇಕು ಎಂದ ಅವರು, ಉತ್ಸವಕ್ಕೆ ಸಂಬಂಧಿಸಿದ ಉಪ ಸಮಿತಿಗಳನ್ನು ರಚಿಸಿ ಉತ್ಸವಕ್ಕೆ ಬೇಕಾದ ಯೋಜನೆಯನ್ನು ರೂಪಿಸಿಕೊಳ್ಳಲು ಸೂಚಿಸಿದರು. ಬರುವ ಸಭೆಯಲ್ಲಿ ಉಪಸಮಿತಿಯವರು ಕ್ರಿಯಾ ಯೋಜನೆ ತಯಾರಿಸಿ ಹಾಜರಾಗಬೇಕು. ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ಇರುತ್ತದೆ. ಕರಾವಳಿ ಉತ್ಸವದ ಮುಂಗಡ ಕಾರ್ಯಗಳು ಅಚ್ಚುಕಟ್ಟಾಗಿ ನಿರ್ವಹಣೆಗೊಳ್ಳಬೇಕು ಎಂದರು. ವಸ್ತು ಪ್ರದರ್ಶನ ವಿಷಯವಾಗಿ ಟೆಂಡರ್ ಕರೆಯಲು ಮಹಾನಗರ ಪಾಲಿಕೆಯವರಿಗೆ ಸೂಚನೆ ನೀಡಲಾಯಿತು. ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನಿರ್ದೇಶಕ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.