ಮಕರ ಸಂಕ್ರಾಂತಿ ಹಿನ್ನಲೆ ನದಿಯಲ್ಲಿ ಸ್ನಾನ ಮಾಡಲು ಹೋಗಿ ನೀರುಪಾಲಾದ ಯುವಕರು…

28
firstsuddi

ರಾಯಚೂರು : ಮಕರ ಸಂಕ್ರಾಂತಿ ಹಿನ್ನಲೆ ಕೃಷ್ಣಾ ನದಿಗೆ ಸ್ನಾನಕ್ಕೆಂದು ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಗಣೇಶ್(40), ಉದಯಕುಮಾರ್ (38) ನೀರುಪಾಲಾದ ಯುವಕರು. ಇಬ್ಬರು ರಾಯಚೂರು ನಗರದ ಎಲ್ ಬಿ ಎಸ್ ನಗರ ನಿವಾಸಿಗಳು. ತಾಲೂಕಿನ ಶಕ್ತಿನಗರದ ಬಳಿ ಇರುವ ಕೃಷ್ಣಾ ನದಿಗೆ ಸ್ನಾನ ಮಾಡಲು ನಿನ್ನೆ ಸ್ನೇಹಿತರೊಂದಿಗೆ ಗಣೇಶ್ ಮತ್ತು ಉದಯ ಕುಮಾರ್ ತೆರಳಿದ್ದರು. ಈ ವೇಳೆ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸದ್ಯ ಗಣೇಶ್ ಶವ ಪತ್ತೆಯಾಗಿದ್ದು, ಉದಯ್ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.