ನವೋದಯ ವಿದ್ಯಾಲಯದ 33 ಮಂದಿಗೆ ವಕ್ಕರಿಸಿದ ಕೊರೊನಾ…

76
firstsuddi

ಕೊಪ್ಪಳ : ಜಿಲ್ಲೆಯ ಕುಕನೂರು ಪಟ್ಟಣದಲ್ಲಿರುವ ನವೋದಯ ವಿದ್ಯಾಲಯದಲ್ಲಿ ಕೊರೊನಾ ಸ್ಫೋಟವಾಗಿದ್ದು, ಓರ್ವ ಶಿಕ್ಷಕ ಸೇರಿದಂತೆ ಒಟ್ಟು 33 ಮಂದಿಗೆ ಕೋವಿಡ್ ದೃಢಪಟ್ಟಿದೆ.

ನವೋದಯ ವಿದ್ಯಾಲಯದಲ್ಲಿ 550 ವಿದ್ಯಾರ್ಥಿಗಳು ಸೇರಿ 618 ಜನರಿದ್ದಾರೆ. ಜನವರಿ 12 ಮತ್ತು 13 ರಂದು ಓರ್ವ ಶಿಕ್ಷಕ ಸೇರಿ 13 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿನ ಎಲ್ಲ 618 ಜನರ ಮಾದರಿಗಳನ್ನು ಟೆಸ್ಟ್ ಮಾಡಲಾಗಿದ್ದು, ಮತ್ತೆ 20 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದೆ.

ಸೋಂಕಿತ ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳನ್ನು ತಳಕಲ್ಲಿನ ಕೊವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದ್ದು, ಉಳಿದ ಸೋಂಕಿತರು ನವೋದಯ ವಸತಿ ಶಾಲೆಯಲ್ಲಿ ಪ್ರತ್ಯೇಕ ಐಸೋಲೆಷನ್ ನಲ್ಲಿದ್ದಾರೆ.