ಮಗಳ ತಂಟೆಗೆ ಬರ್ಬೇಡ ಎಂದಿದ್ದಕ್ಕೆ ಯುವತಿ ತಂದೆಯನ್ನೇ ಬರ್ಬರವಾಗಿ ಕೊಂದ ಪಾಗಲ್ ಪ್ರೇಮಿ..!

81
firstsuddi

ಬೆಂಗಳೂರು/ ನೆಲಮಂಗಲ : ಮಗಳ ಸಹವಾಸಕ್ಕೆ ಬರದಂತೆ ಬುದ್ಧಿವಾದ ಹೇಳಿದಕ್ಕೆ ಯುವತಿಯ ತಂದೆಯನ್ನೇ ಕೊಲೆಗೈದಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಬೆತ್ತನಗೆರೆ ರಸ್ತೆಯಲ್ಲಿ ನಡೆದಿದ್ದು, ಬಳ್ಳಾರಿ ಜಿಲ್ಲೆಯ ಶಿರಗುಪ್ಪ ಮೂಲದ ನಾಗಪ್ಪ ಕೊಲೆಯಾದ ವ್ಯಕ್ತಿ.

ಇಂದು ಬೆಳಗ್ಗೆ ಪೆಪ್ಸಿಕೋ ಕಂಪೆನಿಗೆ ಕೆಲಸಕ್ಕೆ ತೆರಳುತ್ತಿದ್ದ ಸಮಯದಲ್ಲಿ ಅಡ್ಡಗಟ್ಟಿದ ಇಬ್ಬರು ಯುವಕರು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ನಿನ್ನೆ ನರೇಶ್ ಎಂಬ ಪಾಗಲ್ ಪ್ರೇಮಿ ಯುವತಿಯನ್ನು ಪ್ರೀತಿಸುತ್ತಿರುವುದಾಗಿ ನಾಗಪ್ಪ ಅವರ ಮನೆಯ ಮುಂದೆ ಬಂದು ಗಲಾಟೆ ಮಾಡಿದ್ದು, ಒನ್ ಸೈಡ್ ಲವ್ ಬೇಡ ಎಂದು ನಾಗಪ್ಪ ನರೇಶನಿಗೆ ಬುದ್ಧಿವಾದ ಹೇಳಿದ್ದರಂತೆ. ಇದರಿಂದ ಕೋಪಗೊಂಡಿದ್ದ ಆರೋಪಿ ಕೊಲೆ ಮಾಡಿರುವುದಾಗಿ ಮೃತ ನಾಗಪ್ಪನ ಸಂಬಂಧಿ ಆರೋಪ ಮಾಡಿದ್ದಾರೆ.

ಮೃತ ನಾಗಪ್ಪ ತನ್ನ ಮಗನ ಜೊತೆ ಬಸ್ ನಿಲ್ದಾಣಕ್ಕೆ ಡ್ರಾಪ್ ತೆಗೆದುಕೊಳ್ಳುವ ವೇಳೆ ಅಡ್ಡಗಟ್ಟಿದ ಯುವಕರು ಮಗನ ಮುಂದೆಯೇ ತಂದೆಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.