ಮಧ್ಯಮ ವರ್ಗದವರ 2ನೇ ಮನೆಗೂ ತೆರಿಗೆ ಪಾವತಿಯಿಂದ ವಿನಾಯಿತಿ.

25

ನವದೆಹಲಿ: ವೇತನ ಪಡೆಯುವ ತೆರಿಗೆದಾರರಿಗೆ ರೂಪಾಯಿ 12 ಲಕ್ಷದವರೆಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಗ ತೆರಿಗೆದಾರರು ಹೊಂದಿರುವ 2ನೇ ಮನೆಗೂ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿದ್ದಾರೆ. ಇಲ್ಲಿಯವರೆಗೆ ಒಂದು ಮನೆಗೆ ಮಾತ್ರ ತೆರಿಗೆ ವಿನಾಯಿತಿ ಇತ್ತು. 2ನೇ ಮನೆ ಹೊಂದಿದ್ದರೆ ಮಾರುಕಟ್ಟೆ ಮೌಲ್ಯಕ್ಕೆ ತಕ್ಕಂತೆ ತೆರಿಗೆ ವಿಧಿಸಲಾಗುತ್ತಿತ್ತು. ಇದೀಗ ಎರಡನೇ ಮನೆಗೂ ತೆರಿಗೆ ವಿನಾಯಿತಿ ನೀಡುವ ಮೂಲಕ ಮಧ್ಯಮ ವರ್ಗಕ್ಕೆ ಮತ್ತೊಂದು ಸಿಹಿ ಸುದ್ದಿ ಪ್ರಕಟಿಸಿದ್ದಾರೆ. ಈ ಸೌಲಭ್ಯದಿಂದ 2 ಮನೆ ಹೊಂದಿರುವವರು ಒಂದನ್ನು ವಾಸಕ್ಕೆ ಮತ್ತೊಂದು ಆಗಾಗ್ಗೆ ಬಂದು ಹೋಗುವ ಪ್ರವಾಸದ ಮನೆಯಾಗಿ ಹೊಂದಲು ಅವಕಾಶ ನೀಡಲಾಗಿದೆ.