ಮೂಡಿಗೆರೆ : ಅಧಿವೇಶನದಲ್ಲಿ ದೃಶ್ಯ ಮಾಧ್ಯಮ ನಿರ್ಬಂಧಕ್ಕೆ ಸರ್ಕಾರದ ಪ್ಲಾನ್ ವಿಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ…

501

ಮೂಡಿಗೆರೆ : ಅಧಿವೇಶನದಲ್ಲಿ ದೃಶ್ಯ ಮಾಧ್ಯಮ ನಿರ್ಬಂಧಕ್ಕೆ ಸರ್ಕಾರದ ಪ್ಲಾನ್ ವಿಚಾರಕ್ಕೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಹಳಷ್ಟು ಮಾಧ್ಯಮಗಳು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದು, ಆ ಕಾರಣದಿಂದ ನಿಷೇಧ ಹೇರಲು ಹೊರಟಿದ್ದಾರೆ. ನಮ್ಮ ಸರ್ಕಾರ ಇದ್ದಾಗ ನಿರ್ಬಂಧ ಹೇರುವ ಬಗ್ಗೆ ಎಂದೂ ಚಿಂತಿಸಿರಲಿಲ್ಲ. ಆದರೆ ಚಾನಲ್ ಮಾಡಲು ಚಿಂತನೆ ಮಾಡಿದ್ವಿ, ನಿರ್ಬಂಧ ಮಾಡಲು ನಾವು ಹೊರಟಿರಲಿಲ್ಲ. ಬಹಳ ಮಾಧ್ಯಮಗಳು ಅವರ ಪರ ಇದ್ದವು. ಹಾಗಾಗಿ ಹೀಗೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.