ಮೂಡಿಗೆರೆ : ಕಂದಕಕ್ಕೆ ಉರುಳಿದ ಟಿಪ್ಪರ್ : ಚಾಲಕ ಪ್ರಾಣಾಪಾಯದಿಂದ ಪಾರು…

232
firstsuddi

ಕೊಟ್ಟಿಗೆಹಾರ : ಬಾಳೂರು ಹೋಬಳಿಯ ಹೋರಿಕಾನ್ ಎಸ್ಟೇಟ್ ಬಳಿ ಟಿಪ್ಪರ್ ಉರುಳಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುಂಕಸಾಲೆ ಬಳಿ ಹೋರಿಕಾನ್ ಎಸ್ಟೇಟಿಗೆ ಕಟ್ಟಡ ಸಾಮಾಗ್ರಿ ಸಾಗಿಸುವ ಸಂದರ್ಭದಲ್ಲಿ ಟಿಪ್ಪರ್ ಕಂದಕಕ್ಕೆ ಉರುಳಿದ್ದು, ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ. ಟಿಪ್ಪರ್ ಹಿರೇಬೈಲ್ ಮೂಲದ್ದಾಗಿದ್ದು, ಬಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.