ಮೂಡಿಗೆರೆ : ಕಡೂರು – ಮಂಗಳೂರು ಮಾರ್ಗದ ರಸ್ತೆಯಲ್ಲಿರುವ ಗುಂಡಿ ಮುಚ್ಚಲು ಸಾರ್ವಜನಿಕರ ಒತ್ತಾಯ…

105

ಮೂಡಿಗೆರೆ : ಕಡೂರು – ಮಂಗಳೂರು ರಸ್ತೆ ಗುಂಡಿಗಳು ಬಿದ್ದು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಕೂಡಲೇ ರಸ್ತೆ ದುರಸ್ತಿಗೊಳಿಸುವಂತೆ ಕರ್ನಾಟಕ ಧ್ವನಿ ಸಂಘದ ಮಣಿಕೆರೆ ಸುನಿಲ್ ಒತ್ತಾಯಿಸಿದ್ದಾರೆ.ಪಟ್ಟಣದಿಂದ ಹೋಗುವ ಎಲ್ಲ ಮುಖ್ಯರಸ್ತೆಗಳು ದೊಡ್ಡ ದೊಡ್ಡ ಗುಂಡಿಗಳಾಗಿದ್ದು ರಸ್ತೆ ಹದಗೆಟ್ಟ ಪರಿಣಾಮ ರೈತರು, ವಾಹನ ಸವಾರರು ಪರದಾಡುವಂತಾಗಿದೆ” ಶುಕ್ರವಾರ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಪ್ರವಾಸಕ್ಕೆಂದು ಬಂದ ಸವಾರರು ಗುಂಡಿ ತಪ್ಪಿಸಲು ಹೋಗಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ದೂರಿದರು. ಕೂಡಲೇ ಶಾಸಕರು ಈ ಬಗೆ ಗಮನ ಹರಿಸಬೇಕು ಎಂದರು..

ಈ ಕುರಿತು ಸುದ್ದಿಗರರೊಂದಿಗೆ ಮಾತನಾಡಿದ ಆಂಬುಲೆನ್ಸ್ ಚಾಲಕ ವಿನಯ್ ಗೌಡ ಕಡೂರು ಮಂಗಳೂರು ರಸ್ತೆ ಸಂಪೂರ್ಣ ಹದಗೆಟ್ಟು ಮೊಣಕಾಲುದ್ದದ ಗುಂಡಿಗಳು ನಿರ್ಮಾಣವಾಗಿದೆ. ಇದರಲ್ಲಿ ರಸ್ತೆ ಯಾವುದು ಗುಂಡಿ ಯಾವುದು ಎಂದು ತಿಳಿಯದಾಗಿದೆ. ಇಂತಹ ರಸ್ತೆಯಲ್ಲಿ ರೋಗಿಗಳನ್ನು ಸಾಗಿಸುವುದು ತುಂಬಾ ಕಷ್ಟವಾಗಿದೆ , ಮಳೆಗಾಲದಲ್ಲಿ ಗುಂಡಿಯ ತುಂಬಾ ನೀರು ನಿಂತಾಗ.. ಚಾಲಕರಿಗೆ ಗುಂಡಿಯನ್ನು ಗಮನಿಸುವುದು ಕಷ್ಟ ಸಾಧ್ಯ, ಜೀವ ಕಾಪಾಡುವ ಉದ್ದೇಶದಿಂದ ನಾವು ಅತಿಯಾದ ವೇಗದಲ್ಲಿ ಚಲಿಸುವಾಗ ಈ ಗುಂಡಿಗಳಿಂದ ನಮಗೂ ಚಾಲನೆಗೆ ತೊಂದರೆಯಾಗಿದೆ ವಾಹನ ಸವಾರರು ಗುಂಡಿ ತಪ್ಪಿಸುವ ಭರದಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂದರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗುಂಡಿ ಮುಚ್ಚಿಸುವ ಕೆಲಸ ಮಾಡಬೇಕು ಎಂದು  ಆಗ್ರಹಿಸಿದ್ದಾರೆ.