ಮೂಡಿಗೆರೆ : ಕಾಡಾನೆ ದಾಳಿ, ಓರ್ವ ಮಹಿಳೆಗೆ ಗಂಭೀರ ಗಾಯ…

760
firstsuddi
ಮೂಡಿಗೆರೆ : ಕಾಡಾನೆ ದಾಳಿಗೆ ಓರ್ವ ಮಹಿಳೆ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಗುತ್ತಿ ಗ್ರಾಮದಲ್ಲಿ ನಡೆದಿದೆ.
ಜಯ ಎಂಬುವ ಮಹಿಳೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು, ಮಹಿಳೆಯ ಪಕ್ಕೆಲುಬು ಮತ್ತು ಹೊಟ್ಟೆಯ ಭಾಗಗಳಿಗೆ ತೀವ್ರ  ಗಾಯವಾಗಿದ್ದು, ಕೂಡಲೇ ಮಹಿಳೆನ್ನು ಗ್ರಾಮಸ್ಥರು ಎಂ.ಜಿ.ಎಂ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.