ಮೂಡಿಗೆರೆ : ಕಿರುಗುಂದ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ವಿಂದ್ಯಾರಘು ಅವಿರೋಧ ಆಯ್ಕೆ…

1019
firstsuddi

ಮೂಡಿಗೆರೆ : ಇಲ್ಲಿನ ಕಿರುಗುಂದ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ವಿಂದ್ಯಾರಘು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರತೀಶ್ ಅವರು ಘೊಷಣೆ ಮಾಡಿದರು. ಇಂದು ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷರ ಸ್ಥಾನಕ್ಕೆ ವಿಂದ್ಯಾರಘು ಅವರನ್ನು ಆಯ್ಕೆ ಮಾಡಲಾಯಿತು. ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷೆ ವಿಂದ್ಯಾರಘು ಅವರು, ನಾವು ಜನರ ಸೇವಕರು. ಜನರ ಆಶಯಕ್ಕೆ ತಕ್ಕಂತೆ ಕಾನೂನಾತ್ಮಕ ಅಭಿವೃದ್ದಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅನಿತಾ ಮುತ್ತಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಬಿ.ಕೆ ಚಂದ್ರಶೇಖರ್, ಸದಸ್ಯರಾದ ಭಾಗ್ಯ ಲಕ್ಷ್ಮಣಗೌಡ, ರಮೇಶ್, ರಾಜಶೇಖರ್, ಗೋಪಮ್ಮ, ಶೋಭ, ಮಾಜಿ ಅಧ್ಯಕ್ಷರಾದ ರವಿ ಗೌಡ, ಮುಖಂಡರಾದ ಅಣ್ಣೇಗೌಡ, ಸುಧಾಕರ್, ಹೇಮಶೇಖರ್, ಮುತ್ತಪ್ಪ, ಉದುಸೆ ರಘು, ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಾಹಿತ್ಯ ಹಾಗೂ ಸಿಬ್ಬಂದಿಗಳು ಸೇರಿದಂತೆ ಗ್ರಾಮಸ್ಥರು ಭಾಗಿಯಾದರು.