ಮೂಡಿಗೆರೆ : ಕುಸಿದ ಕಳಸ ಕೊಟ್ಟಿಗೆಹಾರ ರಸ್ತೆ- ಅಧಿಕಾರಿಗಳು ರಸ್ತೆ ದುರಸ್ಥಿ ಮಾಡದೇ ನಿರ್ಲಕ್ಷ್ಯ : ಆದರ್ಶ ಬಾಳೂರು ಆರೋಪ…

223
firstsuddi

ಕೊಟ್ಟಿಗೆಹಾರ : ಕಳಸ ಹೊರನಾಡು ಮಹಾಮನೆ ಸಮೀಪದ ರಸ್ತೆ ಕುಸಿದಿದ್ದು ಅಧಿಕಾರಿಗಳು ರಸ್ತೆ ದುರಸ್ಥಿ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜೆಡಿಎಸ್ ಯುವಜನತಾದಳ ಕ್ಷೇತ್ರ ಸಮಿತಿ ಕಾರ್ಯಾಧ್ಯಕ್ಷ ಆದರ್ಶ ಬಾಳೂರು ಆರೋಪಿಸಿದ್ದಾರೆ.
ಕಳಸ ಕೊಟ್ಟಿಗೆಹಾರ ರಸ್ತೆಯಲ್ಲಿ ಮಹಾಮನೆ ಸಮೀಪ ರಸ್ತೆ ಕುಸಿದು ಹಲವು ದಿನಗಳೆ ಕಳೆದಿವೆ. ದಿನನಿತ್ಯ ನೂರಾರು ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ರಾತ್ರಿ ಸಮಯದಲ್ಲಿ ರಸ್ತೆ ಕುಸಿದಿರುವುದು ಕಾಣಿಸದೇ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ರಸ್ತೆ ಕುಸಿದಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಂದರೂ ರಸ್ತೆ ದುರಸ್ಥಿ ,ಆಡಲು ಮುಂದಾಗಿಲ್ಲ. ಶೀರ್ಘ ರಸ್ತೆ ದುರಸ್ಥಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.