ಮೂಡಿಗೆರೆ : ಕ್ರೈನ್ ರಿಪೇರಿ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಕೈ ಕಟ್…

2259
firstsuddi

ಮೂಡಿಗೆರೆ : ಕ್ರೈನ್ ರಿಪೇರಿ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರ ಕೈ ಸಿಕ್ಕಿಹಾಕಿಕೊಂಡು ಕೈ ತುಂಡಾದ ಘಟನೆ ಪಟ್ಟಣದ ಮೇಗಲಪೇಟೆ ಜೀನತ್ ಸಾಮಿಲ್‍ನಲ್ಲಿ ನಡೆದಿದ್ದು, ವಿಶ್ವನಾಥ್ ಎಂಬುವವರು ಆಯಿಲ್ ಸೋರಿಕೆಯಾಗುತ್ತಿದೆ ಎಂದು ರಿಪೇರಿ ಮಾಡಲು ಹೋಗಿ ಯಂತ್ರದೊಳಗೆ ಕೈ ಸಿಲುಕಿಕೊಂಡು ಬಲಗೈ ತುಂಡಾಗಿದ್ದು, ಕೂಡಲೇ ಇವರನ್ನು ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.