ಮೂಡಿಗೆರೆ : ಗಂಟಲು ದ್ರವ ತಪಾಸಣೆಯ ವರದಿಯನ್ನು ಎರಡು ದಿನದೊಳಗೆ ನೀಡುವಂತೆ ಉಪ ತಹಶಿಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ…

363
firstsuddi

ಕಳಸ : ಗಂಟಲು ದ್ರವ ಪರೀಕ್ಷೆಗೆ ನೀಡಿ 15 ದಿನವಾದರೂ ವರದಿ ಬಾರದ ಇರುವ ಹಿನ್ನಲೆಯಲ್ಲಿ ಕಳಸ ಗ್ರಾಮಸ್ಥರು ಅಸಮಾದಾನಕೊಂಡು ಅಸಹಕಾರ ಚಳವಳಿ ಆರಂಭಿಸಿದ್ದಾರೆ.
ಕೊರೋನ ಮುಕ್ತ ಕಳಸ ವ್ಯಾಟ್ಸಾಪ್ ಮುಖಾಂತರ ತ್ವರಿತ ವರದಿ ನೀಡಿ ಇಲ್ಲದಿದ್ದರೆ ಪರೀಕ್ಷೆ ಮಾಡಬೇಡಿ ಎಂದು ಆರಂಭಗೊಂಡ ಈ ಚಳವಳಿಯು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಕಳಸದ ಜನ ಅಭಿಯಾಣವನ್ನೆ ಪ್ರಾರಂಬಿಸಿದ್ದಾರೆ ಅಲ್ಲದೆ ಪಟ್ಟಣದಾದ್ಯಂತ ಸಹಿ ಸಂಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ನಾಡ ಕಚೇರಿ ಉಪ ತಹಶಿಲ್ದಾರ್ ಮುಖಾಂತರ ಮನವಿಯನ್ನು ಸಲ್ಲಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಕೊರೋನ ದುರ್ಭರತೆ ಮತ್ತು ಅದರ ಪಾಶ್ರ್ಯ ಪರಿಣಾಮದಿಂದ ಬಹಳಷ್ಟು ನೊಂದಿದ್ದೇವೆ.ಈ ತಿಂಗಳ ಆರಂಬದಲ್ಲಿ 14 ಸದಸ್ಯರು ಇರುವ ಕೂಡು ಕುಟುಂಬದ ಒಬ್ಬ ವೃದ್ಧೆಗೆ ಸೋಂಕು ತಗುಲಿತ್ತು.ಅನಂತರ ಆಕೆಯ ಪುತ್ರಿಗೂ ಸೋಂಕು ಹರಡಿತು.ಆಗ ಆ ಮನೆಯ ಎಲ್ಲರ ಗಂಟಲ ದ್ರವ ಪರೀಕ್ಷೆ ಮಾಡಿಸಿದಾಗ 12 ದಿನಗಳ ಕಾಯುವಿಕೆ ನಂತರ ಇಬ್ಬರಿಗೆ ಪಾಸಿಟಿವ್ ವರದಿ ಬಂತು.ಅಲ್ಲಿವರೆಗೂ ಮನೆಯ ಎಲ್ಲರೂ ಜೊತೆಯಲ್ಲಿ ಇದ್ದುದರಿಂದ ಜುಲೈ 22 ರಂದು ಆ ಮನೆಯ 10 ಜನರ ವರದಿಯು ಪಾಸಿಟಿವ್ ಬಂದಿದೆ.
ಕಳಸ ಪೊಲೀಸ್ ಸಿಬ್ಬಂದಿಯ ಗಂಟಲ ದ್ರವ ಪರೀಕ್ಷೆ ಮಾಡಿಸಿ 10ದಿನ ಕಳೆದ ಮೇಲೆ 4 ಜನರ ವರದಿ ಪಾಸಿಟೀವ್ ಬಂದಿದೆ.ಅಷ್ಟರಲ್ಲಿ ಅವರೆಲ್ಲರೂ ತಮ್ಮ ಕರ್ತವ್ಯ ಪ್ರಯುಕ್ತ ಊರಿನ ವಿವಿದೆಡೆ ಓಡಾಡಿದ್ದಾರೆ.
ಗಂಟಲ ದ್ರವದ ಮಾದರಿ ಸಂಗ್ರಹಿಸಿ ಎರಡು ದಿನದ ಒಳಗೆ ವರದಿಗಳು ಬರದಿದ್ದರೆ ಎರಡೂ ಪ್ರಕರಣಗಳಲ್ಲಿ ಪಾಸಿಟಿವ್ ಪ್ರಕರಣಗಳು ಬಾರದೆ ಊರಿನ ನೆಮ್ಮದಿ ಉಳಿಯುತ್ತಿತ್ತು.
ಕಳಸವನ್ನು ಕೊರೋನ ಮುಕ್ತವನ್ನಾಗಿ ಮಾಡಬೇಕು ಎನ್ನುವ ದೃಷ್ಠಿಯಿಂದ ಹಗಲಿರುಳು ಶ್ರಮಿಸಿದ್ದೇವೆ ಆದರೆ ವರದಿಯ ವಿಳಂಬ ರೀತಿ ದೋರಣೆಯಿಂದ ಇಂದು 20 ಪಾಸಿಟೀವ್ ಬರುವಂತಾಗಿದೆ.ಆದ್ದರಿಂದ ಇನ್ನು ಮುಂದೆ ಕಳಸದಲ್ಲಿ ಗಂಟಲ ದ್ರವ ತಪಾಸಣೆಯ ವರದಿಗಳು ಎರಡು ದಿನದಲ್ಲಿ ಬಾರದೆ ಇದ್ದಲ್ಲಿ ಕಳಸದಲ್ಲಿ ಯಾರೂ ಕೂಡ ಗಂಟಲು ದ್ರವ ತಪಾಸಣೆ ಮಾಡಿಸದೆ ಇರುವ ಬಗ್ಗೆ ತೀರ್ಮಾಣಕ್ಕೆ ಬಂದಿದ್ದೇವೆ.ಅಲ್ಲದೆಚಿಕ್ಕಮಗಳೂರಿನಲ್ಲಿ ತುರ್ತಾಗಿ ಪ್ರಯೋಗಾಲಯ ಸ್ಥಾಪಿಸಿ ಸಕಾಲದಲ್ಲಿ ವರದಿಗಳನ್ನು ನೀಡದಿದ್ದರೆ ಜಿಲ್ಲೆಯಲ್ಲಿ ಸಾವಿರಾರು ಪ್ರಕರಣಗಳು ಕಂಡು ಬಂದು ಇಡೀ ಜಿಲ್ಲೆಯ ನೆಮ್ಮದಿ ಕೆಡುತ್ತದೆ.ಹೀಗಾದಲ್ಲಿ ಇದಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೇರ ಹೊಣೆಗಾರರಾಗುತ್ತಾರೆ ಎಂದು ಮನವಿಯಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಜಿ.ಪ್ರಕಾಶ್ ಕುಮಾರ್,ಕೆ.ಎಲ್.ವಾಸು,ಯೊಗೀಶ್ ಭಟ್,ಅಜೀಜ್,ಟಿಟ್ಟು ತೋಮಸ್,ಮಮ್ತಾಜ್ ಬೇಗಂ,ಇರ್ಷಾದ್,ರಿಜ್ವಾನ್,ಸಂತೋಷ್,ಶರತ್,ಸತ್ಯೇಂದ್ರ,ಅಬ್ದುಲ್ ಶುಕುರು,ಅನಿಲ್ ಇತರರು ಇದ್ದರು.