ಕೊಟ್ಟಿಗೆಹಾರ : ಮಲೆನಾಡಿನ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಅವರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯ ಅಗತ್ಯವಿದೆ ಎಂದು ಮೂಡಿಗೆರೆ ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಹೇಳಿದರು.
ಬಕ್ಕಿ ಗ್ರಾಮದಲ್ಲಿ ಮೂಡಿಗೆರ ಹಾಹೂ ಬಣಕಲ್ ಕಸಾಪ ವತಿಯಿಂದ ನಡೆದ 25ನೇ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಮನೆಯಂಗಳದಲ್ಲಿ ತಿಂಗಳ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರಲಾಗುತ್ತಿದ್ದು 25 ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸಿ ಅಲ್ಲಿನ ಪ್ರತಿಭಾವಂತರನ್ನು ಬೆಳಕಿಗೆ ತರುವ ಕಾರ್ಯವನ್ನು ಕಸಾಪ ಮಾಡಿದೆ. ಗಾಯನ, ನೃತ್ಯ, ಜಾನಪದ ಸೇರಿದಂತೆ ವಿವಿಧ ಪ್ರಕಾಋಗಳ ಪ್ರತಿಭೆಗಳು ಮುನ್ನೆಲೆಗೆ ಬಂದಿವೆ ಎಂದರು.
ಕೇಂದ್ರ ಮೀನುಗಾರಿಕಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ದೀಪಕ್ ದೊಡ್ಡಯ್ಯ ಮಾತನಾಡಿ ಪೋಷಕರು ಮಕ್ಕಳೀಗೆ ಉತ್ತಮ ಶಿಕ್ಷಣ ಕೊಡಬೇಕು. ಶಿಕ್ಷಣದಿಂದ ಮಾತ್ರ ಸಮಗ್ರ ಅಭೀವೃದ್ದಿ ಸಾಧ್ಯ. ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಏಳಿಗೆ ಹೊಂದಲು ಶಿಕ್ಷಣವೆ ಅಡಿಪಾಯ ಎಂದರು.
ಬಣಕಲ್ ಕಸಾಪ ಅಧ್ಯಕ್ಷ ವಸಂತ್ ಹಾರ್‍ಗೋಡು ಮಾತನಾಡಿ ನಾಲ್ಕು ಗೋಡೆಗಳ ನಡುವೆ ಕಾರ್ಯಕ್ರಮ ನಡೆಸುವ ಸಿದ್ದ ಸೂತ್ರಗಳನ್ನು ಬಿಟ್ಟು ಗ್ರಾಮೀಣ ಭಾಗದ ಜನರ ಮನೆಯಂಗಳದಲ್ಲೆ ಕಾರ್ಯಕ್ರಮ ನಡೆಸುವುದು ಕಸಾಪದ ಉದ್ದೇಶ. ಈ ಕಾರ್ಯಕ್ರಮದಿಂದ ಅದೆಷ್ಟೋ ತೆರೆಮರೆಯ ಪ್ರತಿಭೆಗಳಿಗೆ ವೇದಿಕೆ ಸಿಕ್ಕಿದೆ ಎಂದರು.
ಗಾಯಕರಾದ ಬಕ್ಕಿಮಂಜುನಾಥ್, ಜಯಪಾಲ್, ಬಕ್ಕಿ ರವಿ, ಪ್ರಶಾಂತ್ ಹಾಗೂ ಸಂಗಡಿಗರು ಮತ್ತು ಗ್ರಾಮದ ಯುವತಿಯರು ವಿವಿಧ ಜಾನಪದ ಹಾಡುಗಳನ್ನು ಹಾಡಿದರು.
ಬೆಟ್ಟಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್, ತಾ.ಪಂ. ಸದಸ್ಯ ದೇವರಾಜ್, ಮಲೆನಾಡು ಗಲ್ಪ್ ಅಸೋಸಿಯೇಷನ್ ಅಧ್ಯಕ್ಷ ಹಮೀದ್ ಸಬ್ಬೇನಹಳ್ಳಿ, ಸಂಸ್ಕೃತಿ ಚಿಂತಕ ಪಿ.ಕೆ.ಮಂಜುನಾಥ್, ಕಸಾಪ ಪಧಾಧಿಕಾರಿಗಳಾದ ಡಿ.ಕೆ.ಲಕ್ಷ್ಮಣ್‍ಗೌಡ, ಎಂ.ಎಸ್.ಅಶೋಕ್, ಭಕ್ತೇಶ್, ನಾಗರಾಜ್, ಶೇಖರಪ್ಪ, ವೆಂಕಟೇಶ್, ಹಾ.ಬಾನಾಗೇಶ್, ಸ್ಥಳೀಯರಾದ ಅನಿಲ್‍ಗೌಡ, ಅಶೋಕ್‍ಗೌಡ, ಅಶೋಕ್ ಗೌಡ, ಅಶ್ವಥ್, ಗಿರೀಶ್, ಬಿ.ಜೆ.ರವಿ, ಸುಬ್ಬಯ್ಯ ಹಾಗೂ ಬಕ್ಕಿ ಗ್ರಾಮಸ್ಥರು ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಮನೆಯಂಗಳದಲ್ಲಿ ತಿಂಗಳ ಕಾರ್ಯಕ್ರಮ : ಮಗ್ಗಲಮಕ್ಕಿ...










