ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಆಹಾರ ಸಿಗದೇ ಪರದಾಡುತ್ತಿದ್ದ ಮಂಗಗಳಿಗೆ ಮೂಡಿಗೆರೆ ತಹಶೀಲ್ದಾರ್ ರಮೇಶ್ ಅವರು ಹಣ್ಣುಗಳನ್ನು ನೀಡಿದರು. ಬಳಿಕ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಅವರು ಲಾಕ್‍ಡೌನ್ ಹಿನ್ನಲೆಯಲ್ಲಿ ಚಾರ್ಮಾಡಿ ಘಾಟ್‍ನಲ್ಲಿ ವಾಹನ ಸಂಚಾರ ಕಡಿಮೆಯಾಗಿರುವುದರಿಂದ ಪ್ರವಾಸಿಗರು ನೀಡುವ ತಿಂಡಿ ತಿನಿಸುಗಳನ್ನೆ ನೆಚ್ಚಿಕೊಂಡು ಕೂತ ಮಂಗಗಳು ಆಹಾರ ಸಿಗದೇ ಪರದಾಡುತ್ತಿದ್ದವು. ಆದ್ದರಿಂದ ಹಣ್ಣುಗಳನ್ನು ಹಾಕಿದ್ದೇವೆ ಎಂದರು. ಈ ಸಂದರ್ಭದಲ್ಲಿ ಶಿರಸ್ತೆದಾರ್ ಸಂತೋಷ್, ವೃತ್ತ ನಿರೀಕ್ಷಕ ಜಗನ್ನಾಥ್, ಮುಂತಾದವರು ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಚಾರ್ಮಾಡಿ ಘಾಟ್‍ನಲ್ಲಿ ಆಹಾರ ಸಿಗದೇ ಪರದಾಡುತ್ತಿದ್ದ ಮಂಗಗಳಿಗೆ ಹಣ್ಣುಗಳನ್ನು ನೀಡಿದ ತಹಶೀಲ್ದಾರ್…









