ಮೂಡಿಗೆರೆ : ಚೆಕ್‍ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಫುಡ್ ಲ್ಯಾಂಡ್ ಹೊಟೇಲ್ ಮಾಲೀಕನಿಂದ ಊಟದ ವ್ಯವಸ್ಥೆ…

687
firstsuddi

ಕೊಟ್ಟಿಗೆಹಾರ : ಚೆಕ್‍ಪೋಸ್ಟ್ ಗಳಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಯೂ ಸೇರಿದಂತೆ ಬಣಕಲ್, ಗೋಣಿಬೀಡು ಮತ್ತು ಮೂಡಿಗೆರೆ ಠಾಣೆಯ ಪೊಲೀಸರಿಗೆ ಮೂಡಿಗೆರೆಯ ಫುಡ್ ಲ್ಯಾಂಡ್ ಹೊಟೇಲ್ ಮಾಲೀಕ ಸಿ.ಕೆ ಇಬ್ರಾಹಿಂ ಇಂದು ಮದ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿದ್ದರು.
ಹೊಟೇಲ್ ಮಾಲೀಕ ಸಿ.ಕೆ. ಇಬ್ರಾಹಿಂ ಅವರ ಪುತ್ರಿ ಖತೀಜಾ ಅವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಪೊಲೀಸರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಪೊಲೀಸರು ಕಾರ್ಯ ನಿರ್ವಹಿಸುತ್ತಿರುವ ಸ್ಥಳಕ್ಕೆ ಬೇಟಿ ನೀಡಿ ಊಟದ ಪೊಟ್ಟಣವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಆರಿಫ್, ಫಿಶ್ ಮೋಣು, ಪೊಲೀಸ್ ಸಿಬ್ಬಂದಿಗಳಾದ ಮಾಲತೇಶ್, ನಂದೀಶ್ ಮುಂತಾದವರು ಇದ್ದರು.