ಮೂಡಿಗೆರೆ : ದಾನಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ರಕ್ತದಾನ ಮಾಡಲು ಮುಂದಾಗಬೇಕು : ಮಗ್ಗಲಮಕ್ಕಿ ಗಣೇಶ್.

277
firstsuddi

ಕೊಟ್ಟಿಗೆಹಾರ: ಕರೊನಾ ಕಾರಣದಿಂದ ಈ ದಿನಗಳಲ್ಲಿ ರಕ್ತದ ಅಭಾವ ಹೆಚ್ಚಾಗಿದ್ದು ದಾನಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ರಕ್ತದಾನ ಮಾಡಲು ಮುಂದಾಗಬೇಕು ಎಂದು ಮೂಡಿಗೆರೆ ತಾಲ್ಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಹೇಳಿದರು.
ಮೂಡಿಗೆರೆ ಮತ್ತು ಬಣಕಲ್ ಕಸಾಪ, ಪೀಸ್ ಅಂಡ್ ಅರ್ವೇನೆಸ್ ಟ್ರಸ್ಟ್, ವಿದ್ಯಾಭಾರತಿ ವಿದ್ಯಾಸಂಸ್ಥೆಯ ವತಿಯಿಂದ ಬಣಕಲ್ ಗ್ರಾ.ಪಂ ಸಭಾಂಗಣದಲ್ಲಿ ಬಣಕಲ್ ಕಸಾಪ ಮಾಜಿ ಅಧ್ಯಕ್ಷ ಮೋಹನ್‍ಕುಮಾರ್ ಶೆಟ್ಟಿ ಸ್ಮರಣಾರ್ಥ ನಡೆದ ರಕ್ತದಾನ ಶಿಬಿರ ಹಾಗೂ ಗಿಡ ನಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಕ್ತವನ್ನು ಕೃತಕವಾಗಿ ತಯಾರಿಸಲು ಬರುವುದಿಲ್ಲ. ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆಗೆ ಅನುಗುಣವಾಗಿ ರಕ್ತದ ಲಭ್ಯತೆ ಇಲ್ಲದಿರುವುದರಿಂದ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ರಕ್ತದ ಅವಶ್ಯಕತೆಗಳನ್ನು ಪೂರೈಸಬೇಕಿದೆ ಎಂದರು.
ಬಣಕಲ್ ಕಸಾಪ ಅಧ್ಯಕ್ಷ ವಸಂತ್ ಹಾರ್‍ಗೋಡು ಮಾತನಾಡಿ ಮೋಹನ್‍ಕುಮಾರ್ ಶೆಟ್ಟಿ ಅವರು ಸಾಂಸ್ಕøತಿಕವಾಗಿ, ಶೈಕ್ಷಣಿಕವಾಗಿ ಸಕ್ರಿಯವಾಗಿದವರು ಅವರ ಸ್ಮರಣೆಯನ್ನು ರಕ್ತದಾನ ಶಿಬಿರದಂತಹ ಕಾರ್ಯಕ್ರಮಗಳ ಮೂಲಕ ಮಾಡುತ್ತಿರುವುದು ಅರ್ಥಪೂರ್ಣ ಎಂದರು.
ಪೀಸ್ ಅಂಡ್ ಅರ್ವೇನೆಸ್ ಟ್ರಸ್ಟ್‍ನ ಅಧ್ಯಕ್ಷ ಅಲ್ತಾಪ್ ಬಿಳುಗುಳ ಮಾತನಾಡಿ ಪ್ರತಿ ಕ್ಷಣಕ್ಕೂ ನಮ್ಮ ಆಸುಪಾಸಿನಲ್ಲಿಯೇ ಯಾರಿಗಾದರೂ ರಕ್ತದ ಅವಶಯಕತೆ ಎದುರಾಗುತ್ತಲೇ ಇರುತ್ತದೆ. ರಕ್ತದಾನವನ್ನು ಉತ್ತಮ ಆರೋಗ್ಯ ಮತ್ತು ದೇಹದ ತೂಕ ಇರುವ ವ್ಯಕ್ತಿಗಳು ಮಾಡಬಹುದು. ಹೃದಯದ ಆರೋಗ್ಯಕ್ಕೂ ರಕ್ತದಾನ ಒಳ್ಳೆಯದು. ನಿಯಮಿತವಾಗಿ ರಕ್ತದಾನ ಮಾಡುತ್ತಾ ಇರುವ ಮೂಲಕ ಉದ್ವೇಗ, ಮಾನಸಿಕ ಒತ್ತಡ, ತಳಮಳ ಹಾಗೂ ಖಿನ್ನತೆ ಇಲ್ಲವಾಗುತ್ತದೆ ಎಂದರು.
ರಕ್ತದಾನ ಶಿಬಿರದಲ್ಲಿ ಅಂದರಾದ ಗಿರೀರ್ಶ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಎಂ ಭರತ್, ಗಲ್ಪ್ ಅಸೋಸಿಯೇಷನ್ ಅಧ್ಯಕ್ಷ ಹಮೀದ್ ಸಬ್ಬೇನಹಳ್ಳಿ, ತಾಲ್ಲೂಕು ಕಸಾಪ ಕಾರ್ಯದರ್ಶಿ ಲಕ್ಷ್ಮಣಗೌಡ, ಕಸಾಪ ಮಾಜಿ ಅಧ್ಯಕ್ಷ ಅಶೋಕ್, ಬಣಕಲ್ ಗ್ರಾ.ಪಂ ಮಾಜಿ ಅಧ್ಯಕ್ಷ ಸುರೇಶ್, ಗ್ರಾ.ಪಂ ಸದಸ್ಯೆ ದಿಲ್‍ದಾರ್ ಬೇಗಂ, ಜೇಸಿಐ ಸ್ಥಾಪಕ ಅಧ್ಯಕ್ಷ ಸುರೇಶ್ ಶೆಟ್ಟಿ, ಜೇಸಿರೇಟ್ ಅಧ್ಯಕ್ಷೆ ಶಾಲಿನಿ ಸೋಮೇಶ್‍ಗೌಡ, ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಬಕ್ಕಿ ಮಂಜುನಾಥ್, ಸ್ಕೌಟ್ ಅಂಡ್ ಗೈಡ್ಸ್ ತಾಲ್ಲೂಕು ಖಜಾಂಚಿ ಜಯಪಾಲ್, ಮೋಹನ್ ಕುಮಾರ್ ಶೆಟ್ಟಿ ಅವರ ಪತ್ನಿ ಸೌಭಾಗ್ಯ ಮೋಹನ್ ಶೆಟ್ಟಿ, ಪುತ್ರ ಪ್ರಸಾದ್ ಶೆಟ್ಟಿ, ಪಧಾಧಿಕಾರಿಗಳಾಧ ಭಕ್ತೇಶ್, ಸಂತೋಷ್ ಸಾಲಿಯಾರ್, ಪ್ರಭಾಕರ್ ಬಿನ್ನಡಿ, ವಿನಯ್ ಶೆಟ್ಟಿ, ಅಭಿಲಾಷ್, ಅರುಣ್ ಪೂಜಾರಿ, ನಿಶಾಂತ್, ಮುಂತಾದವರು ಇದ್ದರು.