ಕೊಟ್ಟಿಗೆಹಾರ : ಹೆದ್ದಾರಿ ಬದಿಯ ನಿರ್ಮಾಣ ಹಂತದ ಬಾಕ್ಸ್ ಚರಂಡಿಯಲ್ಲಿ ಹಸುವೊಂದು ಬಿದ್ದ ಘಟನೆ ಕೊಟ್ಟಿಗೆಹಾರದಲ್ಲಿ ನಡೆದಿದೆ.
ಮೂಡಿಗೆರೆ ಹ್ಯಾಂಡ್‍ಪೋಸ್ಟ್‍ನಿಂದ ಕೊಟ್ಟಿಗೆಹಾರದವರೆಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದಿ ಕಾಮಗಾರಿ ನಡೆಯುತ್ತಿದ್ದು ಇದರ ಭಾಗವಾಗಿ ಕೊಟ್ಟಿಗೆಹಾರ ಪಟ್ಟಣದಲ್ಲಿ ಹೆದ್ದಾರಿಯ ಒಂದು ಬದಿ ಅಗಲೀಕರಣ ಮಾಡೊ ಬಾಕ್ಸ್ ಚರಂಡಿ ನಿರ್ಮಿಸಲಾಗುತ್ತಿದ್ದು ಬಾಕ್ಸ್ ಚರಂಡಿಗಾಗಿ ತೆಗೆದ ಗುಂಡಿಗೆ ಹಸುವೊಂದು ಬಿದ್ದು ಪರದಾಡಿದ ಘಟನೆ ನಡೆಯಿತು.
ಗುಂಡಿಯಲ್ಲಿ ಬಿದ್ದು ಮೇಲೆ ಬರಲಾಗದೇ ಪರದಾಡುತ್ತಿದ್ದ ಹಸುವನ್ನು ಸ್ಥಳೀಯರು ಹರಸಾಹಸ ಪಟ್ಟು ಮೇಲೆತ್ತಿದ್ದರು. ಕಳೆದ ಹಲವು ದಿನಗಳಿಂದ ಬಾಕ್ಸ್ ಚರಂಡಿ ಕಾಮಗಾರಿ ನಡೆಯುತ್ತಿದ್ದು ನಿಧಾನ ಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಜನದಟ್ಟಣೆ ಹೆಚ್ಚಿರುವ ಹಾಗೂ ಜಾನುವಾರುಗಳಿರುವುದರಿಂದ ಬಾಕ್ಸ್ ಚರಂಡಿಗಾಗಿ ನಿರ್ಮಿಸಿದ ಗುಂಡಿಯಲ್ಲಿ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ಸಂಬಮದಪಟ್ಟವರು ಶೀರ್ಘದಲ್ಲಿ ಕಾಮಗಾರಿ ಮುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.










