ಮೂಡಿಗೆರೆ : ನೂತನ ಹಾಪ್ ಕಾಮ್ಸ್ ಮಳಿಗೆ ಶಾಸಕ ಎಂ. ಪಿ. ಕುಮಾರಸ್ವಾಮಿ ಅವರಿಂದ ಉದ್ಘಾಟನೆ…”

476

ಮೂಡಿಗೆರೆ : ಜಿಲ್ಲಾ ತೋಟಗಾರಿಕಾ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ ನಿಯಮಿತ ಚಿಕ್ಕಮಗಳೂರುನಿಂದ ಅಡ್ಯಂತಾಯ ರಂಗಮಂದಿರದ ಬಳಿ ನೂತನವಾಗಿ ನಿರ್ಮಿಸಿದ ಹೊಸ ಹಾಪ್‍ಕಾಮ್ಸ್ ಮಳಿಗೆಯನ್ನು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಉದ್ಘಾಟಿಸಿದರು.
ತಾಲ್ಲೂಕಿನ ನಾಗರೀಕರಿಗೆ ಅನುಕೂಲವಾಗುವಂತೆ ಪಟ್ಟಣದ ಅಡ್ಯಂತಾಯ ರಂಗಮಂದಿರದ ಬಳಿಯ ಅಂಚೆ ಕಛೇರಿ ಮುಂಭಾಗದಲ್ಲಿ ಇರುವ ಪಟ್ಟಣ ಪಂಚಾಯತಿ ಮಳಿಗೆ ಸಂಖ್ಯೆ 5 ಮತ್ತು 6ರಲ್ಲಿ ಹಾಪ್‍ಕಾಮ್ಸ್ ವತಿಯಿಂದ ತರಕಾರಿ ಹಾಗೂ ಹಣ್ಣಿನ ಮಾರಾಟವನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ ಬಹುತೇಕ ಕಡೆಗಳಲ್ಲಿ ಸಾರ್ವಜನಿಕರ ಆರೋಗ್ಯವನ್ನು ಕಡೆಗಣಿಸಿ ವಿಷಪೂರಿತ ಅಥವಾ ರಾಸಾಯನಿಕ ಸಿಂಪಡಣೆ ಮಾಡಿದ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಹಾಪ್‍ಕಾಮ್ಸ್ ಸಂಸ್ಥೆಯು ಜನರ ಆರೋಗ್ಯದ ದೃಷ್ಟಿಯಿಂದ ಉತ್ತಮ ಗುಣಮಟ್ಟದ ಸಾವಯವ ಹಾಗೂ ವಿಷಪೂರಿತ ಔಷಧಿಗಳನ್ನು ಸಿಂಪಡಿಸದ ತಾಜಾ ಹಣ್ಣು ಹಾಗೂ ತರಕಾರಿಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಮಳಿಗೆಯನ್ನು ತೆರೆದಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕು ಎಂದು ಹಾಪ್‍ಕಾಮ್ಸ್ ನಿರ್ದೇಶಕ ಡಿ.ಬಿ.ಜಯಪ್ರಕಾಶ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ತೋಟಗಾರಿಕಾ ನಿರ್ದೇಶಕ ಅಮಿನ್ ಅಹಮದ್, ಸಹಾಯಕ ತೋಟಗಾರಿಕಾ ಅಧಿಕಾರಿ ಬಿ.ಎಸ್.ರಾಮಯ್ಯ, ಹಾಪ್ ಕಾಮ್ಸ್ ಅಧ್ಯಕ್ಷ ರಾಮಚಂದ್ರಪ್ಪ, ಸಹಾಯಕ ನಿರ್ದೇಶಕ ಸೋಮಶೇಖರ್, ಚಿಕ್ಕಮಗಳೂರು ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಲೋಹಿತ್, ಬಿಜೆಪಿ ಮುಖಂಡ ಹಳಸೆ ಶಿವಣ್ಣ, ಜಿ.ಪಂ.ಸದಸ್ಯೆ ಸುಧಾ ಯೋಗೇಶ್, ಬಿಜೆಪಿ ತಾಲ್ಲೂಕು ಮಂಡಳ ಅಧ್ಯಕ್ಷ ಜೆ.ಎಸ್.ರಘು, ತಾ.ಪಂ.ಸದಸ್ಯ ಸುಂದರ್ ಕುಮಾರ್, ಜಿ.ಪಂ.ಮಾಜಿ ಸದಸ್ಯ ಶಿವೇಗೌಡ ಸೇರಿದಂತೆ ಪಟ್ಟಣ ಪಂಚಾಯತಿಯ ವಿವಿಧ ಸದಸ್ಯರುಗಳು ಭಾಗವಹಿಸಿದ್ದರು.