ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮೂರು ಕೊರೋನಾ ಪಾಸಿಟಿವ್…

227
firstsuddi

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಮೂರು ಮಂದಿಯಲ್ಲಿ ಕೊರೋನಾ ವೈರಸ್ ಪಾಸಿಟಿವ್ ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 11 ವರ್ಷದ ಬಾಲಕಿ, 16 ವರ್ಷದ ಯುವತಿ ಹಾಗು 35 ವರ್ಷದ ಮಹಿಳೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಕಂಡುಬಂದಿದ್ದು, 11 ವರ್ಷ ಮತ್ತು 35 ವರ್ಷದವರು ರೋಗಿ ಸಂಖ್ಯೆ 536ರೊಂದಿಗೆ ಸಂಪರ್ಕ ಇದ್ದರೆ, 16 ವರ್ಷದ ಯುವತಿಗೆ ರೋಗಿ ಸಂಖ್ಯೆ 390 ರೊಂದಿಗೆ ಸಂಪರ್ಕದಿಂದ ಸೋಂಕು ಹರಡಿದೆ, ಇವರಿಗೆ ಕೊರೋನಾ ಲಕ್ಷಣ ಕಂಡು ಬಂದಿದ್ದು ಅವರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಅವರ ವರದಿ ಬಂದಿದ್ದು, ಕೊರೋನಾ ಪಾಸಿಟಿವ್ ದೃಢಪಟ್ಟಿದೆ.