ಮೂಡಿಗೆರೆ: ಪಟ್ಟಣದ ಪಿ.ಸಿ.ಎ.ಆರ್.ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಬಿ.ಹೊಸಹಳ್ಳಿಯ ಹೆಚ್.ಆರ್.ಸುಧೀರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಹೆಚ್.ಆರ್.ಸುಧೀರ್ ಅವರು. ಕಳೆದ ಹತ್ತು ವರ್ಷಗಳಿಂದ ಮೂಡಿಗೆರೆ ಪಿ.ಸಿ.ಎ.ಆರ್.ಡಿ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಹೆಚ್.ಬಿ.ಶಿವಣ್ಣ ಅವರು ಮೂರು ರಾಜ್ಯ ಪ್ರಶಸ್ತಿ, 4 ಜಿಲ್ಲಾ ಪ್ರಶಸ್ತಿಯನ್ನು ಪಡೆಯುವುದರೊಂದಿಗೆ ಸಾಲ ವಸೂಲಾತಿಯಲ್ಲಿ ಅತ್ಯತ್ತಮ ಸಾಧನೆಯನ್ನು ಮಾಡಿದ್ದು. ಅವರ ಮಾರ್ಗದರ್ಶನದಲ್ಲಿ ಮತ್ತು ಸದಸ್ಯರುಗಳ ಹಾಗೂ ಬ್ಯಾಂಕಿನ ಸಿಬ್ಬಂಧಿಗಳ ಸಹಕಾರದೊಂದಿಗೆ ಬ್ಯಾಂಕ್ ಅಭಿವೃದ್ದಿಯ ಪಥದಲ್ಲಿ ಮುನ್ನಡೆಯನ್ನು ಸಾಧಿಸಲು ಶ್ರಮವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಹಕಾರಿ ದುರೀಣ ಓ.ಎಸ್.ಗೋಪಾಲಗೌಡ, ರಂಜನ್ ಅಜಿತ್ ಕುಮಾರ್, ಹೆಚ್.ಎಸ್.ಮಂಜುನಾಥ್, ಹೆಚ್.ಬಿ.ಶಿವಣ್ಣ, ಹೆಚ್.ಟಿ.ರವಿಕುಮಾರ್, ಕೆ.ಟಿ.ಸತೀಶ್, ಎಂ.ಜೆ.ಕೃಷ್ಣೇಗೌಡ್ರು, ಶ್ರೀಮತಿ ನಿರ್ಮಲ, ಬಿ.ಎಲ್.ಪುಷ್ಪಲತಾ, ಪ್ರಕಾಶ್ ಹೆಗ್ಡೆ, ಓ.ಜಿ.ರವಿ, ಹೆಚ್.ಕೆ.ಕೇಶವ, ಸಿಇಒ ಕಾರ್ತಿಕ್ ಸಿ.ಎಂ. ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾಗಿ ಸಹಕಾರಿ ಅಭಿವೃದ್ದಿ ಅಧಿಕಾರಿ ಗುರುಮೂರ್ತಿ ಕಾರ್ಯನಿರ್ವಹಿಸಿದ್ದರು.










