ಚಿಕ್ಕಮಗಳೂರು :- ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಬಲ್ಲಾಳರಾಯ ದುರ್ಗಾ ವ್ಯೂ ಪಾಯಿಂಟ್ ಪ್ರವಾಸಿಗರನ್ನು ತನ್ನತ್ತ ಹೆಚ್ಚಾಗಿ ಸೆಳೆಯುತ್ತಿದೆ.
ಈ ಪ್ರವಾಸಿ ತಾಣವು ಚಿಕ್ಕಮಗಳೂರಿನಿಂದ ಸುಮಾರು 71 ಕಿ.ಮೀ. ಅಂತರದಲ್ಲಿದ್ದು, ಈ ಜಾಗಕ್ಕೆ ತೆರಳಲು ಮೂಡಿಗೆರೆ, ಕೊಟ್ಟಿಗೆಹಾರ ಮಾರ್ಗವಾಗಿ ಕೆಳಗೂರು ಮೂಲಕ ತೆರಳಿ ದುರ್ಗದಹಳ್ಳಿ ಸಮೀಪದಲ್ಲೇ ಈ ಪ್ರವಾಸಿ ತಾಣಕ್ಕೆ ತಲುಪಬಹುದು.
ಬಲ್ಲಾಳರಾಯನ ದುರ್ಗಾ ವ್ಯೂ ಪಾಯಿಂಟ್ನ ಸುತ್ತಮುತ್ತಲು ಎರಡು ಎತ್ತರದ ಗುಡ್ಡಗಳಿದ್ದು ಸುತ್ತಲು ಅರಣ್ಯವು ಆವರಿಸಿದೆ. ಈ ತಾಣವು ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುತ್ತಿದ್ದು ಇಲ್ಲಿ ನವಿಲು ಸೇರಿದಂತೆ ಮುಂತಾದ ಪಕ್ಷಿ ವಲಯಗಳಿವೆ. 
ಈ ಪ್ರದೇಶದಲ್ಲಿ ಸುಮಾರು ವರ್ಷಗಳ ಹಳೆಯ ಮರಗಳಿದ್ದು ಅವುಗಳಲ್ಲಿ ಕೆಲವು ಮರಗಳ ಬೇರುಗಳು ಸುತ್ತಮುತ್ತ ಹೆಚ್ಚಾಗಿ ಹರಡಿಕೊಂಡಿದ್ದು ಅದು ಪ್ರವಾಸಿಗರಿಗೆ ತುಂಬಾ ವಿಭಿನ್ನವಾಗಿ ಕಾಣಿಸುತ್ತವೆ. ಇದೇ ಪ್ರವಾಸಿ ತಾಣದಲ್ಲೇ 100 ಮೀಟರ್ ಅಂತರದಲ್ಲೇ ಶ್ರೀ ಕಾಲಭೈರೇಶ್ವರನ ದೇವಾಲಯವಿದೆ.










