ಮೂಡಿಗೆರೆ : ಬಣಕಲ್ ಗ್ರಾ.ಪಂ ವತಿಯಿಂದ ಪೊಲೀಸರಿಗೆ ಮಾಸ್ಕ್, ಕುಡಿಯುವ ನೀರು ವಿತರಣೆ…

426
firstsuddi

ಕೊಟ್ಟಿಗೆಹಾರ: ಬಣಕಲ್ ಗ್ರಾ.ಪಂ ವತಿಯಿಂದ ಬಣಕಲ್ ಮತ್ತು ಕೊಟ್ಟಿಗೆಹಾರದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರಿಗೆ ಮಾಸ್ಕ್, ಕುಡಿಯುವ ನೀರು ಮತ್ತು ಬಿಸ್ಕೆಟ್‍ಗಳನ್ನು ವಿತರಿಸಲಾಯಿತು.
ಬಣಕಲ್ ಗ್ರಾ.ಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ ಮಾತನಾಡಿ ಬಣಕಲ್ ಗ್ರಾ.ಪಂ ವತಿಯಿಂದ 5 ಸಾವಿರಕ್ಕೂ ಹೆಚ್ಚು ಮಾಸ್ಕ್‍ಗಳನ್ನು ಹೊಲಿದು ತಾ.ಪಂ ಗೆ ನೀಡಲಾಗಿದೆ. ಪೊಲೀಸರು, ಅಶಾ ಕಾಯಕರ್ತರು ಸೇರಿದಂತೆ ಸ್ವಯಂ ಸೇವಕರಿಗೆ ಮಾಸ್ಕ್‍ಗಳನ್ನು ವಿತರಿಸಲಾಗಿದೆ. ಬಣಕಲ್ ಗ್ರಾ.ಪಂ ವ್ಯಾಪ್ತಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮತ್ತು ಕೊರೊನಾ ಹರಡದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಬಣಕಲ್ ಗ್ರಾ.ಪಂ ಪಿಡಿಓ ಕೃಷ್ಣಪ್ಪ, ಮಾಜಿ ಗ್ರಾ.ಪಂ ಅಧ್ಯಕ್ಷ ಸುರೇಶ್, ಸದಸ್ಯರಾದ ಅನಿಲ್, ಸುರೇಶ್, ಇಪ್ರಾನ್, ರಾಮಚಂದ್ರ ಮುಂತಾದವರು ಇದ್ದರು.