ಮೂಡಿಗೆರೆ : 4 ನೇ ಬಾರಿ ಮುಖ್ಯಮಂತ್ರಿಯಾಗಿ ಬಿ.ಎಸ್ .ಯಡಿಯೂರಪ್ಪ ಅವರು ಪ್ರಮಾಣ ವಚನ ಹಿನ್ನೆಲೆ ಪಟ್ಟಣದ ಲಯನ್ಸ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ದುಂಡುಗ ಪ್ರಮೋದ್ , ಪಟ್ಟಣ ಪಂಚಾಯಿತಿ ಸದಸ್ಯರಾದ ಧರ್ಮಪಾಲ್ , ಪಟ್ಟದೂರು ಪುಟ್ಟಣ್ಣ ,ಬಿಜೆಪಿ ಮುಖಂಡರಾದ ಹಾಲಪ್ಪ ಗೌಡ ,ಕನ್ನಹಳ್ಳಿ ಭರತ್, ಹಳ್ಳಿಬೈಲ್ ಗಿರೀಶ್ , ಸಂಜಯ್ ಕೊಟ್ಟಿಗೆಹಾರ ಜೈಪಾಲ್ ಬಿದರಹಳ್ಳಿ ,ಪಟೇಲ್ ಮಂಜು, ಬಿಳಗುಳ ಚಂದ್ರು, ಡಿ.ಎಸ್ ಸುರೇಂದ್ರ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾದರು.










