ಮೂಡಿಗೆರೆ : ಬಿಜೆಪಿ ಮಂಡಲದ ನೂತನ ಅಧ್ಯಕ್ಷರಾಗಿ ರಘು ಜನ್ನಾಪುರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಂಟರ ಭವನದಲ್ಲಿ ಇಂದು ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದ್ದು, ಇವರು ಎಬಿವಿಪಿ ಸಂಚಾಲಕರಾಗಿ, 2 ಬಾರಿ ಡಿ.ಎಸ್.ಬಿ.ಜಿ ಕಾಲೇಜು ಅಧ್ಯಕ್ಷರಾಗಿ ಹಾಗೂ ಬಿಜೆಪಿ ಜಿಲ್ಲಾ ಯುವಮೋರ್ಚ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಚುನಾವಣೆ ವೀಕ್ಷಕರಾಗಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ, ಬಿಜೆಪಿ ಸಂಚಾಲಕರಾದ ಮನೋಜ್ ಹಳೇಕೋಟೆ, ಬಿಜೆಪಿ ಮುಖಂಡರಾದ ಕಲ್ಲೇಶ್ ಮಾಕೋನಹಳ್ಳಿ, ದುಂಡುಗಾ ಪ್ರಮೋದ್, ದಿನೇಶ್ ದೇವರುಂದಾ, ಪಂಚಾಕ್ಷರಿ, ಹಳೇಮೂಡಿಗೆರೆ ಜಗದೀಶ್, ಕಣಚೂರು ವಿನೋದ್ ಇದ್ದರು.










