ಮೂಡಿಗೆರೆ : ಭಾರತೀಯ ಜನತಾ ಪಾರ್ಟಿ(ಬಿಜೆಪಿ) ತನ್ನ ಸಂಸ್ಥಾಪಕ ಶಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ಜುಲೈ 6ರಿಂದ ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಿದ್ದು, ಆಗಸ್ಟ್ 10ರವರೆಗೆ ಮುಂದುವರೆಯಲಿದ್ದು, ಕೇಸರಿ ಪಕ್ಷವು ಪ್ರಸ್ತುತ 11 ಕೋಟಿ ಸದಸ್ಯರನ್ನು ಹೊಂದಿದ್ದು, ಇಂದು ಮೂಡಿಗೆರೆ ಲಯನ್ಸ್ ವೃತ್ತದಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿ ನೇತೃತ್ವದಲ್ಲಿ ಅಭಿಯಾನಕ್ಕೆ ನಂ: 8980808080 ಮಿಸ್ ಕಾಲ್ ನೀಡುವುದರ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಕೆ.ಸಿ ರತನ್ ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಮನೋಜ್ ಕುಮಾರ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಪ್ರಮೋದ್ ದುಂಡುಗಾ, ಅಭಿಯಾನದ ಸಂಚಾಲಕ ವಿನೋದ್ ಕಣಚೂರು, ನಗರ ಸಂಚಾಲಕ ಬಾಲು ಶೆಟ್ಟಿ, ಬಿಜೆಪಿ ಮುಖಂಡರಾದ ಹಾಲೂರು ಪಂಚಾಕ್ಷರಿ, ಪ್ರಶಾಂತ್ ಬಿಳಗುಳ, ಸುದೇವ್ ಗುತ್ತಿ, ಸಂಜಯ್ ಕೊಟ್ಟಿಗೆಹಾರ, ಬಾಳೂರು ಭರತ್, ಜನ್ನಾಪುರ ರಘು, ಸುರೇಂದ್ರ, ಸುನೀಲ್, ಪಟೇಲ್ ಮಂಜು, ಮಗ್ಗಲಮಕ್ಕಿ ಚಂದ್ರೇಶ್ ಹಾಗೂ ಇತರರು ಇದ್ದರು.










