ಮೂಡಿಗೆರೆ : ಭಾರತಿಬೈಲ್‍ನ ಅರಣ್ಯದಲ್ಲಿ ಹುಲಿ ಚಲನವಲನದ ಪತ್ತೆಗೆ ಕ್ಯಾಮರಾ ಟ್ರ್ಯಾಪ್ ಅಳವಡಿಕೆ…

426
firstsuddi

ಕೊಟ್ಟಿಗೆಹಾರ: ಹುಲಿ ಸಂಚಾರ ಇರುವ ಭಾರತಿಬೈಲ್‍ನ ಅರಣ್ಯದಲ್ಲಿ ಹುಲಿ ಚಲನವಲನದ ಪತ್ತೆಗೆ ಅರಣ್ಯ ಅಧಿಕಾರಿಗಳು ಕ್ಯಾಮರಾ ಟ್ರ್ಯಾಪ್ ಅಳವಡಿಸಿದರು. ಭಾರತಿಬೈಲ್‍ನ ಅರಣ್ಯಕ್ಕೆ ಹೊಂದಿಕೊಂಡಿರುವ ಕಾಫಿತೋಟ ಮತ್ತು ಅರಣ್ಯಪ್ರದೇಶದಲ್ಲಿ ಹುಲಿಯ ಹೆಜ್ಜೆ ಗುರುತು ಮತ್ತು ಹಿಕ್ಕೆಗಳು ಕಂಡು ಬಂದಿದ್ದವು. ಭಾರತಿಬೈಲ್ ಗ್ರಾಮದ ಕೃಷಿಕರಾದ ರಫೀಕ್ ಅವರು ತೋಟಕ್ಕೆ ಹೋದ ಸಂದರ್ಭದಲ್ಲಿ ಹುಲಿಯ ಘರ್ಜನೆಯನ್ನು ಕೇಳಿ ಗಾಬರಿಗೊಂಡಿದ್ದರು. ಕೆಲ ದಿನಗಳ ಹಿಂದೆ ಜಿಲ್ಲಾ ಅಧಿಕಾರಿಗಳ ತಂಡ ಸ್ಥಳಕ್ಕೆ ಬೇಟಿ ನೀಡಿ ಹುಲಿ ಚಲನವಲನ ಪತ್ತೆಗೆ ಕ್ಯಾಮರಾ ಅಳವಡಿಸುವುದಾಗಿ ತಿಳಿಸಿದ್ದರು.
ಉಪವಲಯ ಅರಣ್ಯಾಧಿಕಾರಿ ಉಮೇಶ್, ಅರಣ್ಯ ರಕ್ಚಕ ಮೋಸಿನ್ ಹುಲಿ ಸಂಚಾರ ಇರುವ ಸ್ಥಳಗಳಲ್ಲಿ ಕ್ಯಾಮರಾ ಅಳವಡಿಸಿದರು. ಈ ವೇಳೆ ಕೃಷಿಕರಾದ ರಫೀಕ್ ಇದ್ದರು