ಮೂಡಿಗೆರೆ : ವಿಜಯದಶಮಿ ಪ್ರಯುಕ್ತ ಆರ್‍ಎಸ್‍ಎಸ್ ಕಾರ್ಯಕರ್ತರಿಂದ ಪಥಸಂಚಲನ…

1045
firstsuddi

ಮೂಡಿಗೆರೆ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಇಂದು ಹೊಸ ಗಣವೇಷ ಧರಿಸಿ ಪಟ್ಟಣದ ಪ್ರಮುಖ ಬೀದಿಯಲ್ಲಿ ವಿಜಯದಶಮಿ ಪ್ರಯುಕ್ತ ಪಥಸಂಚಲನ ನಡೆಸಿದರು. 1925 ಸೆ.27ರ ವಿಜಯದಶಮಿಯಂದು ಡಾ.ಜಿ ಎಂದು ಕರೆಯುವ ಡಾ.ಕೇಶವ ಬಲಿರಾಮ ಹೆಗ್ಗಡೆ ಅವರಿಂದ ಪ್ರಾರಂಭವಾದ ಆರ್‍ಎಸ್‍ಎಸ್ ಸಂಘಟನೆ ಈಗಾ ಜಗತ್ತಿನಲ್ಲೇ ಅತ್ಯಂತ ಬಲಿಷ್ಠ ಸಂಘಟನೆ ಎಂಬ ಖ್ಯಾತಿಗೆ ಒಳಗಾಗಿದ್ದು, ಪಥಸಂಚಲನದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರತನ್ ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯ ಮನೋಜ್, ಆರ್‍ಎಸ್‍ಎಸ್ ಕಾರ್ಯಕರ್ತರಾದ ಹುಲ್ಲೇಮನೆ ಚಂದ್ರು, ಪಟೇಲ್ ಮಂಜು, ಕನ್ನೆಹಳ್ಳಿ ಭರತ್, ಪರೀಕ್ಷಿತ್ ಜಾವಳಿ, ಮಗ್ಗಲಮಕ್ಕಿ ಕೀರ್ತಿ, ಆದರ್ಶ್ ತರ್ವೆ, ಬಾಲಚಂದ್ರಶೆಟ್ಟಿ, ಉಮಾಶಂಕರ್ ಹಾಗೂ ಕೊಟ್ಟಿಗೆಹಾರ ಸಂಜಯ್ ಸೇರಿದಂತೆ ಇತರರು ಇದ್ದರು.