ಮೂಡಿಗೆರೆ : ಶಾಲಾ ಬಸ್ – ಬೈಕ್ ನಡುವೆ ಡಿಕ್ಕಿ- ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ…

1495

ಮೂಡಿಗೆರೆ : : ಶಾಲಾ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿರೋ ಘಟನೆ ಮೂಡಿಗೆರೆ ತಾಲೂಕಿನ ಅಣಜೂರು ತಿರುವಿನಲ್ಲಿ ನಡೆದಿದೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನೋಡ್ದೋರು ಮೈ ಝುಮ್ ಎನ್ನಿಸುವಂತಿದೆ. ಕನ್ನಹಳ್ಳಿ ಗ್ರಾಮದ ಬೈಕ್ ಸವಾರ ಗೋಪಾಲ್‍ಗೆ ಗಂಭೀರ ಗಾಯವಾಗಿದ್ದು ಮೂಡಿಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಪಡೆಯುತ್ತಿದ್ದಾರೆ. ತಿರುವಿನಲ್ಲಿ ಬಂದ ಶಾಲಾ ಬಸ್ ಯಾವುದೇ ಸೂಚನೆ ನೀಡದೆ ಏಕಾಏಕಿ ಬಸನ್ನ ಬಲಕ್ಕೆ ತಿರುಗಿಸಿದ್ದೇ ಅವಘಡಕ್ಕೆ ಕಾರಣ ಎಂದು ಹೇಳಲಾಗ್ತಿದೆ. ಬಸ್ಸಿನ ಮುಂಭಾಗದಿಂದ ಬಂದ ಬೈಕ್ ಸವಾರ ಬೈಕನ್ನ ನಿಯಂತ್ರಿಸಲಾಗದೆ ಡಿಕ್ಕಿ ಹೊಡಿದಿದ್ದಾನೆ. ಗೋಣಿಬೀಡು ಪೊಲೀಸ್  ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.